ಬೆಂಗಳೂರು:ಹುಬ್ಬಳ್ಳಿಯಲ್ಲಿ ನಡೆದ ಸ್ಫೋಟ ಪ್ರಕರಣ ಕಿಡಿಗೇಡಿಗಳ ಕೃತ್ಯವಾಗಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಶಕ್ತಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹುಬ್ಬಳಿಯಲ್ಲಿ ಬಾಂಬ್ ಸ್ಫೋಟ ವಿಚಾರ ಸ್ಫೋಟದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ತೆರೆದು ನೋಡಿದ ವ್ಯಕ್ತಿಗೆ ಗಾಯ ಆಗಿದೆ. ಕಿಡಿಗೇಡಿಗಳು ಇದನ್ನು ಮಾಡಿರ್ತಾರೆ. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ನಿನ್ನೆ ನಡೆದ ಪೊಲೀಸ್ ಸಭೆಯಲ್ಲೂ ಕೂಡ ರಾತ್ರಿ ಹೆಚ್ಚು ಗಸ್ತು ತಿರುಗಲು ಸೂಚಿಸಿದ್ದೇನೆ ಎಂದರು.
ಹುಬ್ಬಳ್ಳಿ ಸ್ಪೋಟ ಕಿಡಿಗೇಡಿಗಳ ಕೃತ್ಯ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿಕೆ ಮಳೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಉತ್ತರ ಕರ್ನಾಟಕ ಭಾಗದಲ್ಲಿ 60-70 ವರ್ಷಗಳಲ್ಲೇ ಅಧಿಕ ಮಳೆಯಾಗುತ್ತಿದೆ. ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಮ್ಮ ಜಿಲ್ಲೆಯಲ್ಲೂ ಹೆಚ್ಚು ಮಳೆಯಾಗುತ್ತಿದೆ. ಮಳೆ ಕಡಿಮೆಯಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈಗಾಗಲೇ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ಕೊಡಲಾಗಿದೆ. ನಮ್ಮ ಮುಖ್ಯಕಾರ್ಯದರ್ಶಿಗಳು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಮುಂದೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ ಎಂದರು.
ಕಾವೇರಿಗಾಗಿ ಕಾಯುತ್ತೇನೆ
ಗೃಹ ಕಚೇರಿ ಪಕ್ಕದಲ್ಲಿ, ಸಿಎಂ ಮನೆ ಇದ್ದರೆ ಬಹಳ ಸೂಕ್ತ ಆಡಳಿತ ನಡೆಸೋದಕ್ಕೂ ಇದು ಸಹಾಯಕಾರಿ. ಸಿದ್ದರಾಮಯ್ಯ ಅವರಿಗೆ ನಾನೇನು ಹೆಚ್ಚು ಹೇಳಲ್ಲ, ಸಿದ್ದರಾಮಯ್ಯನವರೇ ಅರ್ಥ ಮಾಡಿಕೊಳ್ಳಬೇಕು. ಕಾವೇರಿ ನಿವಾಸಕ್ಕಾಗಿ ನಾನು ಇನ್ನೂ ಕಾಯುತ್ತೇನೆ. ಸಿದ್ದರಾಮಯ್ಯ ಯಾವಾಗ ನಿವಾಸ ಬಿಡುತ್ತಾರೊ ಆಗ ಕಾವೇರಿ ನಿವಾಸಕ್ಕೆ ತೆರಳುತ್ತೇನೆ. ನನಗೆ ಅಲಾಟ್ ಆದ ರೇಸ್ ವ್ಯೂವ್ ಕಾಟೇಜ್ ಸಕಲ ವ್ಯವಸ್ಥೆಯನ್ನ ಹೊಂದಿದೆ. ಅಲ್ಲಿಗೆ ಬಂದು ಸಿದ್ದರಾಮಯ್ಯ ಇದ್ದರೆ ನಮ್ಮದೇನು ತಕರಾರಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.
ಮನೆ ಖಾಲಿ ಮಾಡೋದಕ್ಕೆ ಒಂದು ತಿಂಗಳು ಸಮಯ ಕೇಳಿದ್ದರು. ಡಿಪಿಆರ್ ಮನೆ ಖಾಲಿ ಮಾಡುವಂತೆ ಪತ್ರ ಬರೆದಿತ್ತು. ಆದರೆ ನನಗೂ ಕೂಡ ತಿಳಿಸದೇ ಸಿದ್ದರಾಮಯ್ಯನವರ ನಾಮಫಲಕವನ್ನ ಅಧಿಕಾರಿಗಳು ತೆರವುಗೊಳಿಸಿದ್ದರು. ಆದರೆ ಮತ್ತೆ ಈಗ ನಾಮಫಲಕವನ್ನ ಅಳವಡಿಸಲಾಗಿದೆ. ಅವರು ಕಾವೇರಿ ನಿವಾಸ ಬಿಟ್ಟಾಗ ನಾನು ಹೋಗುತ್ತೇನೆ. ಯಾವುದೇ ಕಾರಣಕ್ಕೂ ಒತ್ತಾಯ ಮಾಡಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.