ಬೆಂಗಳೂರು: ಉತ್ತಮ ಕರ್ನಾಟಕ ಹಾಗೂ ಉತ್ತರ ಭಾರತದಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರು ಹಾಗೂ ಬಡವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸರಬರಾಜು ಮಾಡುತ್ತಿರುವ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ನಡೆಸಿದರು.
10 ಸಾವಿರ ಕುಟುಂಬಕ್ಕೆ ದಿನಸಿ ಸರಬರಾಜು ಶೋಭಾ ಕರಂದ್ಲಾಜೆ ಕಾರ್ಯಕ್ಕೆ ಸಿಎಂ ಶ್ಲಾಘನೆ - cm of karnataka
ಸಂಕಷ್ಟದಲ್ಲಿರುವ ಕಾರ್ಮಿಕರು ಹಾಗು ಬಡವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸರಬರಾಜು ಮಾಡುತ್ತಿರುವ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ನಿತ್ಯ 10 ಸಾವಿರ ಕುಟುಂಬಗಳಿಗೆ 20 ದಿನಗಳ ತನಕ 10 ಕೆಜಿ ಅಕ್ಕಿ, 2 ಕೆಜಿ ಬೇಳೆ, ಅರ್ಧ ಕೆಜಿ ಎಣ್ಣೆ ಮತ್ತು 1 ಕೆಜಿ ಉಪ್ಪಿನ ಪ್ಯಾಕೆಟ್ಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಸರಬರಾಜು ಮಾಡುತ್ತಿದ್ದಾರೆ.
ಕೋವಿಡ್ -19 ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಭಾರತ್ ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಗೆ ಪ್ರತಿದಿನ 10 ಸಾವಿರ ಕುಟುಂಬಗಳಿಗೆ 20 ದಿನಗಳ ತನಕ 10 ಕೆಜಿ ಅಕ್ಕಿ, 2 ಕೆಜಿ ಬೇಳೆ, ಅರ್ಧ ಕೆಜಿ ಎಣ್ಣೆ ಮತ್ತು 1 ಕೆಜಿ ಉಪ್ಪಿನ ಪ್ಯಾಕೆಟ್ಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಸರಬರಾಜು ಮಾಡುತ್ತಿದ್ದಾರೆ. ರೇಷನ್ ಕಾರ್ಡ್ ಇಲ್ಲದ ಉತ್ತರ ಭಾರತೀಯ ಮತ್ತು ಉತ್ತರ ಕರ್ನಾಟಕದ ಕಾರ್ಮಿಕರು ಹಾಗೂ ಬಡವರಿಗೆ ಈ ದಿನಸಿ ಸಾಮಗ್ರಿಗಳು ನೀಡಲಾಗುತ್ತಿದೆ.
ವೈಯಾಲಿ ಕಾವಲ್ನಲ್ಲಿರುವ ಶೋಭಾ ಕರಂದ್ಲಾಜೆ ಅವರ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹಾರ ಧಾನ್ಯಗಳ ಪರಿಶೀಲನೆ ನಡೆಸಿದರು. ಕಳೆದ ಮೂರು ದಿನಗಳಿಂದ ಆಹಾರ ಧಾನ್ಯಗಳನ್ನು ಕಳುಹಿಸಿ ಕೊಡುತ್ತಿರುವುದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.