ಕರ್ನಾಟಕ

karnataka

ETV Bharat / state

ಸಿಎಂ ರಾಜಕೀಯ ಕಾರ್ಯದರ್ಶಿ ಸಹಿ ಪೋರ್ಜರಿ, ಯಾಮಾರಿದ ಬಿಎಸ್​ವೈ - SR Vishwanath

ಪೋರ್ಜರಿ ಸಹಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೇ ಅಧಿಕಾರಿಯೊಬ್ಬರು ಯಾಮಾರಿಸಿದ ಘಟನೆ ಬೆಳಕಿಗೆ ಬಂದಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಸಹಿ ಫೋರ್ಜರಿ

By

Published : Oct 11, 2019, 4:30 PM IST

ಬೆಂಗಳೂರು: ಪೋರ್ಜರಿ ಸಹಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೇ ಅಧಿಕಾರಿಯೊಬ್ಬರು ಯಾಮಾರಿಸಿದ ಘಟನೆ ಬೆಳಕಿಗೆ ಬಂದಿದೆ.

ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನೇ ಅಧಿಕಾರಿಯೊಬ್ಬರು ಯಾಮಾರಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಚಂದ್ರಕಾಂತ್ ಬಿ.ಕೆ ಎನ್ನುವವರು ಪೋರ್ಜರಿ ಸಹಿ ಮಾಡಿ ಸಿಎಂ ಅವರನ್ನೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಸಹಿ ನಕಲಿ

ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಸಹಿಯನ್ನು ನಕಲಿ ಮಾಡಿ, ವಿಶ್ವನಾಥ್ ಹೆಸರಿನ ಲೆಟರ್ ಹೆಡ್ ಬಳಸಿ ಸಿಎಂಗೆ ಪತ್ರ ಬರೆಯಲಾಗಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಹಾಯಕ ಯೋಜನಾ ಅಧಿಕಾರಿ ವಿಠ್ಠಲ್ ಕಾವಳೆ ಅವರ ಜಾಗಕ್ಕೆ ವರ್ಗಾಯಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಈ ಪತ್ರದ ಅಸಲಿಯತ್ತು ತಿಳಿಯದ ಸಿಎಂ ಯಡಿಯೂರಪ್ಪ, ನಕಲಿ ಪತ್ರಕ್ಕೆ ವರ್ಗಾವಣೆಗೆ ಆದೇಶಿಸಿ ಸಹಿ ಮಾಡಿದ್ದಾರೆ. ಸಿಎಂ ಸಚಿವಾಲಯ ಆರ್​ಡಿಪಿಆರ್ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನೆ ಮಾಡಲಾಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಲೆಡರ್ ಹೆಡ್ ದುರುಪಯೋಗ ಹಾಗೂ ನಕಲಿ ಸಹಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಕೂಡ ನಕಲಿ ಪತ್ರಕ್ಕೆ ಸಹಿ ಹಾಕಿರುವುದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದ್ಯ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details