ಕರ್ನಾಟಕ

karnataka

ETV Bharat / state

ಪಿರಮಲ್ ಗ್ರೂಪ್ ಅಧ್ಯಕ್ಷರ ಜತೆ ಸಿಎಂ ಸಭೆ: ರಾಜ್ಯದಲ್ಲಿ ಹೂಡಿಕೆಗೆ ಪಿರಮಲ್ ಗ್ರೂಪ್ ಆಸಕ್ತಿ - karnataka cm latest news

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಪಿರಮಲ್​​​ ಗ್ರೂಪ್‍ನ ಅಧ್ಯಕ್ಷ ಆನಂದ್ ಪಿರಮಲ್ ವರ್ಚುವಲ್ ಸಭೆ ನಡೆಸಿ ಹೂಡಿಕೆ ಸಂಬಂಧ ಚರ್ಚೆ ನಡೆಸಿದರು

CM-Piramal Group President's Meeting
ಸಿಎಂ‌-ಪಿರಮಲ್ ಗ್ರೂಪ್ ಅಧ್ಯಕ್ಷರ ಸಭೆ : ರಾಜ್ಯದಲ್ಲಿ ಹೂಡಿಕೆಗೆ ಪಿರಮಲ್ ಗ್ರೂಪ್ ಆಸಕ್ತಿ

By

Published : Oct 13, 2020, 3:56 PM IST

ಬೆಂಗಳೂರು: ಕರ್ನಾಟಕದಲ್ಲಿ ಔಷಧೀಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಪಿರಮಲ್ ಗ್ರೂಪ್ ಆಸಕ್ತಿ ತೋರಿದ್ದು, ಇದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದು ಸಿಎಂ ಯಡಿಯೂರಪ್ಪ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಪಿರಮಲ್​​ ಗ್ರೂಪ್‍ನ ಅಧ್ಯಕ್ಷ ಆನಂದ್ ಪಿರಮಲ್​ ಜೊತೆ ವರ್ಚುವಲ್ ಸಭೆ ನಡೆಸಿದ ಸಿಎಂ, ಹೂಡಿಕೆ ಸಂಬಂಧ ಚರ್ಚೆ ನಡೆಸಿದರು. ರಾಜ್ಯ ಸರ್ಕಾರ ಕಳೆದ ದಿನಗಳಲ್ಲಿ ಅನೇಕ ಸುಧಾರಣೆಗಳನ್ನು ತಂದು ಕೈಗಾರಿಕೆಗಳಿಂದ ಅತಿ ಹೆಚ್ಚು ಹೂಡಿಕೆ ಆಕರ್ಷಿಸುತ್ತಿದೆ. ರಾಜ್ಯದಲ್ಲಿ ಹೂಡಿಕೆಗೆ ಅವಕಾಶಗಳನ್ನು ತೆರೆದಿಟ್ಟಿದೆ. ಕೊರೊನಾ ನಮಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ಇತ್ತೀಚೆಗೆ ಕರ್ನಾಟಕ ನೂತನ ಕೈಗಾರಿಕಾ ನೀತಿಯನ್ನು ಘೋಷಿಸಿದ್ದು, ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಇದು ಸಹಕಾರಿಯಾಗಿದೆ ಎಂದರು.

ಯೋಜನೆಗಳನ್ನು ಜಾರಿಗೆ ತರಲು ಇದ್ದ ಅಡೆತಡೆಗಳನ್ನು ನಿವಾರಿಸಿ, ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ರಾಜ್ಯವು ಕೈಗಾರಿಕೆಗಳ ಸ್ಥಾಪನೆ, ಬೆಳವಣಿಗೆ ಹಾಗೂ ನಿರ್ವಹಣೆಗೆ ಪೂರಕ ವಾತಾವರಣವನ್ನು ಹೊಂದಿದೆ. ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಇತರೆಡೆಗಳಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಪೂರಕ ವ್ಯವಸ್ಥೆಗಳನ್ನು ಮಾಡಿದೆ ಎಂದು ಸಿಎಂ ತಿಳಿಸಿದರು.

ಔಷಧ ತಯಾರಿಕಾ ವಲಯದಲ್ಲಿ ಫಾರ್ಮಾ ರಫ್ತು, ಸಂಶೋಧನೆ ಮತ್ತು ಪ್ಯಾಕೇಜಿಂಗ್‍ನಲ್ಲಿ ಕರ್ನಾಟಕದಲ್ಲಿ ಅತ್ಯುತ್ತಮ ವಾತಾವರಣವಿದೆ. ಬಯೋಕಾನ್, ಜೆನೆಕಾ, ಸೇರಿದಂತೆ ಅನೇಕ ಪ್ರಖ್ಯಾತ ಸಂಸ್ಥೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ತಕ್ಷಣವೇ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಪಿರಮಲ್​ ಗ್ರೂಪ್‍ನ ಅಧ್ಯಕ್ಷ ಆನಂದ್ ಪಿರಮಲ್, ತಮ್ಮ ಸಂಸ್ಥೆಗೆ ಔಷಧ ತಯಾರಿಕೆಯಲ್ಲಿ ಅಪಾರ ಅನುಭವವಿದೆ. ಜಾಗತಿಕ ಮಟ್ಟದಲ್ಲಿ ಶಾಖೆಗಳನ್ನು ಹೊಂದಿದೆ. ಔಷಧ ತಯಾರಿಕೆಯನ್ನು ಕರ್ನಾಟಕದಲ್ಲಿ ವಿಸ್ತರಿಸಲು ಆಸಕ್ತಿ ಹೊಂದಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ಅಗತ್ಯ ಅನುಮೋದನೆಗಳನ್ನು ನೀಡಲಾಗುತ್ತಿರುವುದನ್ನು ತಿಳಿದು ಹೂಡಿಕೆಗೆ ಹಾಗೂ ಪಾಲುದಾರಿಕೆಗೆ ಉತ್ಸುಕವಾಗಿದ್ದೇವೆ ಎಂದರು.

ABOUT THE AUTHOR

...view details