ಬೆಂಗಳೂರು: ನೆರೆ ಹಾನಿಯಿಂದ ನಾಶವಾದ ಕೊಡಗು ಜಿಲ್ಲೆಗೆ ಪುನರ್ವಸತಿ ಕಲ್ಪಿಸಲು ಅಗತ್ಯವಿರುವ ಹೆಚ್ಚುವರಿ 500 ಕೋಟಿ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಕೊಡಗು ಪುನರ್ವಸತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ಕೊಡಗು ಡಿಸಿ ಅನಿಸ್ ಕನ್ಮಣಿ ಜಾಯ್, ಕೊಡಗು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ಪೋಸೀಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಕೂಡ ಸಿಎಂ ಆಹ್ವಾನದ ಮೇರೆಗೆ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಪುನರ್ವಸತಿ ಕಾರ್ಯದ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು. ಅನುದಾನ ಬಿಡುಗಡೆ, ಕಾಮಗಾರಿ ಪ್ರಗತಿ ಹೆಚ್ಚುವರಿ ಹಣಕಾಸು ಅಗತ್ಯತೆ ಕುರಿತು ಚರ್ಚೆ ನಡೆಸಲಾಯಿತು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೋಪಯ್ಯ, ಕೊಡಗು ಪುನರ್ವಸತಿ ಬಗ್ಗೆ ಸಿಎಂ ಯಡಿಯೂರಪ್ಪ ಸಭೆ ಮಾಡಿದ್ದಾರೆ. ನೆರೆ ವೇಳೆ, 40 ಗ್ರಾಮಗಳಿಗೆ ಹಾನಿಯಾಗಿತ್ತು. ಸದ್ಯದ ಪರಿಸ್ಥಿತಿ ಬಗ್ಗೆ ಸಿಎಂ ಮಾಹಿತಿ ಪಡೆದರು. ಹೆಚ್ಚುವರಿ 500 ಕೋಟಿ ಹಣ ಬೇಕಾಗಿತ್ತು. ಸಿಎಂ ಅವರು ಈ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮನೆ ಕಟ್ಟಲು ಖಾಸಗಿಯವರು ಮುಂದೆ ಬಂದರೆ ಅವರಿಗೆ ಜಾಗ ನೀಡಲು ಸಿಎಂ ಸೂಚನೆ ನೀಡಿದ್ದಾರೆ. ಆಗಸ್ಟ್ 7-8 ರಂದು ಸಿಎಂ ಕೊಡಗು ಭೇಟಿ ನೀಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಕೊಡುಗಿಗೆ ಹೆಚ್ಚು ಹಣ ನೀಡಿದ್ದೇವೆ ಅಂತ ಹೇಳಿದ್ದಾರೆ. ಆದರೆ, ಅದೆಲ್ಲ ಸರಿಯಾದ ಮಾಹಿತಿ ಅಲ್ಲ. ಕುಮಾರಸ್ವಾಮಿ ಸರ್ಕಾರದಲ್ಲಿ ಸುಮಾರು 85 ಕೋಟಿ ಬಿಡುಗಡೆ ಆಗಿತ್ತು. ಸಾರ್ವಜನಿಕರ ವಂತಿಕೆಯಿಂದ 98 ಕೋಟಿ ಹಣ ಬಂದಿತ್ತು. ಇದರಲ್ಲಿ 98 ಕೋಟಿ ಖರ್ಚು ಆಗಿದೆ. ಎನ್.ಡಿ.ಆರ್.ಎಫ್ ಸುಮಾರು 58 ಕೋಟಿ ಬಿಡುಗಡೆ ಆಗಿದೆ ಅಷ್ಟೆ ಎಂದಿದ್ದಾರೆ.