ಕರ್ನಾಟಕ

karnataka

ETV Bharat / state

ಸಚಿವರೊಂದಿಗೆ ಸಿಎಂ ಬಿಎಸ್‌ವೈ ಸಭೆ: 12 ಗಂಟೆಗೆ ಡಿಸಿಗಳ ಜೊತೆ ವಿಡಿಯೋ ಸಂವಾದ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕಳೆದ ಒಂದೂವರೆ ಗಂಟೆಯಿಂದ ಸಿಎಂ ಯಡಿಯೂರಪ್ಪ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. 11 ಗಂಟೆಗೆ ಜಿಲ್ಲಾಧಿಕಾರಿಗಳ ಜೊತೆ ಆರಂಭಗೊಳ್ಳಬೇಕಿದ್ದ ವೀಡಿಯೋ ಸಂವಾದವನ್ನು 12 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

cm meeting with ministers
ಸಚಿವರೊಂದಿಗೆ ಸಿಎಂ ಸಭೆ

By

Published : Apr 29, 2021, 11:47 AM IST

ಬೆಂಗಳೂರು: ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸಬೇಕಿದ್ದ ಸಭೆ 1 ಗಂಟೆ ವಿಳಂಬವಾಗಿ ಆರಂಭಗೊಳ್ಳಲಿದೆ. ‌ಸಚಿವರೊಂದಿಗಿನ ಸಭೆ ಮುಂದುವರೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದೊಂದಿಗಿನ ಸಭೆ ವಿಳಂಬವಾಗಲಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.

ಸಚಿವರೊಂದಿಗೆ ಸಿಎಂ ಸಭೆ

ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕಳೆದ ಒಂದೂವರೆ ಗಂಟೆಯಿಂದ ಸಿಎಂ ಯಡಿಯೂರಪ್ಪ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ್, ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಭೈರತಿ ಬಸವರಾಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಜೊತೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ಸುದೀರ್ಘ ಸಮಾಲೋಚನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹರಕೆಯಂತೆ ಆರ್​​ಸಿಬಿಗೆ ಗೆಲುವು: ದೇವರಿಗೆ ದಂಡ ನಮಸ್ಕಾರ ಹಾಕಿ ಕಾಯಿ ಒಡೆದ ಯುವಕ

10 ಗಂಟೆಗೆ ಆರಂಭಗೊಂಡ ಸಭೆ 11.30 ಆದರೂ ಮುಂದುವರದಿದೆ. ಈ ಹಿನ್ನೆಲೆಯಲ್ಲಿ 11 ಗಂಟೆಗೆ ಜಿಲ್ಲಾಧಿಕಾರಿಗಳ ಜೊತೆ ಆರಂಭಗೊಳ್ಳಬೇಕಿದ್ದ ವಿಡಿಯೋ ಸಂವಾದವನ್ನು 12 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

ABOUT THE AUTHOR

...view details