ಕರ್ನಾಟಕ

karnataka

ETV Bharat / state

ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ತಜ್ಞರೊಂದಿಗೆ ಸಿಎಂ ಸಮಾಲೋಚನೆ - Meeting of Chief Minister BS Yeddyurappa

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಲಾಕ್ ಡೌನ್ ಹೊರತುಪಡಿಸಿ ಇತರ ಎಲ್ಲಾ ಆಯಾಮಗಳಲ್ಲಿಯೂ ಚಿಂತನೆ ನಡೆಸುತ್ತಿದ್ದು, ಶಾಸಕರು, ಸಂಸದರ ಸಭೆ ನಂತರ ತಜ್ಞರೊಂದಿಗೂ ಸಮಾಲೋಚನೆ ನಡೆಸಿದೆ.

CM meeting with Experts to Prevent Increasing Corona Infection
ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸಿಎಂ ತಜ್ಞರೊಂದಿಗೆ ಸಮಾಲೋಚನೆ

By

Published : Jun 26, 2020, 7:35 PM IST

ಬೆಂಗಳೂರು:ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಲಾಕ್ ಡೌನ್ ಹೊರತುಪಡಿಸಿ ಇತರ ಎಲ್ಲಾ ಆಯಾಮಗಳಲ್ಲಿಯೂ ಚಿಂತನೆ ನಡೆಸುತ್ತಿದ್ದು, ಶಾಸಕರು, ಸಂಸದರ ಸಭೆ ನಂತರ ತಜ್ಞರೊಂದಿಗೂ ಸಮಾಲೋಚನೆ ನಡೆಸಿದೆ.

ವಿಧಾನಸೌಧದಲ್ಲಿ ಬೆಂಗಳೂರಿನ ಸರ್ವಪಕ್ಷ ಶಾಸಕರು, ಸಂಸದರು ಹಾಗು ಸಚಿವರ ಜೊತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಭೆ ನಡೆಸಿದರು. ನಂತರ ಸರ್ಕಾರಿ ನಿವಾಸ ಕಾವೇರಿಯಲ್ಲಿ ತಜ್ಞರ ಸಮಿತಿ ಸಭೆ ನಡೆಸಿದರು. ಡಾ. ದೇವಿಶೆಟ್ಟಿ, ಡಾ. ಮಂಜುನಾಥ್, ಡಾ. ಗಿರೀಶ್, ಡಾ. ಸುದರ್ಶನ ಹಾಗು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ. ಎಂ ವಿಜಯಭಾಸ್ಕರ್ ಸಭೆಯಲ್ಲಿ ಭಾಗಿಯಾಗಿದ್ದರು.

ಸಚಿವ ಸಂಪುಟ ಸಭೆ, ಸರ್ವ ಪಕ್ಷ ಶಾಸಕರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಹಾಗು ಸರ್ಕಾರದ ನಿಲುವನ್ನು ಮುಂದಿಟ್ಟುಕೊಂಡು ಕೊರೊನಾ ನಿಯಂತ್ರಣಕ್ಕೆ ಅನುಸರಿಸಬೇಕಿರುವ ಮಾರ್ಗಗಳ ಕುರಿತು ತಜ್ಞರ ಜೊತೆ ಸಿಎಂ ಸಮಾಲೋಚನೆ ನಡೆಸಿ ಸಲಹೆಗಳನ್ನು ಆಲಿಸಿದರು.

ಜುಲೈ, ಆಗಸ್ಟ್ ನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಅಗತ್ಯ ಸಿದ್ದತೆ ಮಾಡಿಕೊಂಡು ಸನ್ನದ್ದವಾಗಿರಬೇಕು ಆ ಸಮಯದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲು ಹೊರಟರೆ ಪರಿಸ್ಥಿತಿ ಕೈ ಮೀರಲಿದೆ. ಅಗತ್ಯ ಹಾಸಿಗೆ ಸೌಲಭ್ಯ, ವೆಂಟಿಲೇಟರ್, ಐಸಿಯು ಸೇರಿದಂತೆ ಎಲ್ಲ ರೀತಿಯಲ್ಲಿಯೂ ಸರ್ಕಾರ ಮುನ್ನೆಚ್ಚರಿಕೆಯಾಗಿ ಸಿದ್ದತೆ ಪೂರ್ಣಗೊಳಿಸಿಕೊಂಡಿರಬೇಕು ಯಾವ ಕಾರಣಕ್ಕೂ ಎಚ್ಚರ ತಪ್ಪಬಾರದು ಎನ್ನುವ ಸಲಹೆಯನ್ನು ಸಮಿತಿ ನೀಡಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details