ಬೆಂಗಳೂರು:ರಾಜಧಾನಿಕೊರೊನಾ ವೈರಸ್ನ ಹಾಟ್ ಸ್ಪಾಟ್ ಆಗಿರುವುದರಿಂದ ಬೆಂಗಳೂರು ಶಾಸಕರು, ಎಂಎಲ್‌ಸಿಗಳ ಜೊತೆ ಸಿಎಂ ಸುದೀರ್ಘ ಚರ್ಚೆ ನಡೆಸಿದರು. ಪ್ರಮುಖವಾಗಿ ಬಡವರಿಗೆ ಆಹಾರ ವಿತರಣೆ, ಲಾಕ್ಡೌನ್ನ ಕಠಿಣ ಅನುಷ್ಠಾನದ ಬಗ್ಗೆ ಶಾಸಕರು ಸಿಎಂಗೆ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಾಸಕರು ಲಾಕ್‌ಡೌನ್ ವೇಳೆ ಜನರು ಬೇಕಾಬಿಟ್ಟಿ ಓಡಾಡುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸುಮ್ಮನೆ ಓಡಾಡುವ ಜನರ ಮೇಲೆ ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಬೇಕು. ಲಾಕ್‌ಡೌನ್ ಮೊದಲ ನಾಲ್ಕು ದಿನ ಅಷ್ಟೇ ಪಾಲನೆ ಆಗಿದೆ. ಆದರೆ, ಈಗ ಜನರು ಸುಖಾಸುಮ್ಮನೆ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ನೀಡಿ:
ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಆಹಾರ ನೀಡುತ್ತಿರುವುದನ್ನು ಮುಂದುವರೆಸುವಂತೆ ಹಲವರು ಮನವಿ ಮಾಡಿದರು. ಊಟ ಇಲ್ಲದೇ ಜನರು ಪರದಾಡುತ್ತಿದ್ದಾರೆ, ಊಟ ನೀಡಿ. ಬಡವರಿಗೆ ಮಾಸ್ಕ್ಗಳನ್ನೂ ಕೊಡುವಂತೆ ಮನವಿ ಮಾಡಿದರು.