ಬೆಂಗಳೂರು:ಭಾರತ ಸಂವಿಧಾನದ ಕನ್ನಡ ಅವತರಣಿಕೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಲೋಕಾರ್ಪಣೆ ಮಾಡಿದರು.
ಕೃತಿ ಬಿಡುಗಡೆ ಬಳಿಕ ಮಾತನಾಡಿದ ಸಿಎಂ, ಈ ಕೃತಿ ಮೂಲಕ ಸ್ಥಳೀಯ ಭಾಷೆಯಲ್ಲಿ ಭಾರತದ ಸಂವಿಧಾನದ ಬಗ್ಗೆ ತಿಳಿಯಲು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಸಹಕಾರಿಯಾಗಲಿದೆ. ಬಜೆಟ್ ಅಧಿವೇಶನದಲ್ಲಿ ಸಂವಿಧಾನ ಕುರಿತು ಎರಡು ದಿನಗಳ ಚರ್ಚೆ ನಡೆಯಲಿದೆ. ಮಾರ್ಚ್ 3 ಮತ್ತು 4ರಂದು ಸಂವಿಧಾನ ಕುರಿತು ಚರ್ಚೆ ನಡೆಸಲಿದ್ದೇವೆ. ನಮ್ಮ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಈ ಚರ್ಚೆಯಲ್ಲಿ ಭಾಗವಹಿಸಲು ಕೋರುತ್ತೇನೆ ಎಂದು ಕರೆ ನೀಡಿದರು.
ಭಾರತ ಸಂವಿಧಾನದ ಕನ್ನಡ ಅವತರಣಿಕೆ ಬಿಡುಗಡೆ ಮಾಡಿದ ಸಿಎಂ ಇದೇ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅಂಬೇಡ್ಕರ್ ಒಬ್ಬ ಶ್ರೇಷ್ಠ ಮನುಷ್ಯ. ಭಾರತದಲ್ಲಿ ಸರ್ವರೂ ಭಾತೃತ್ವ ಭಾವನೆಯಿಂದ ಬದುಕಲು ಅಂಬೇಡ್ಕರ್ ಕಾರಣ. ಅವರು ಎದುರಿಸಿದ ಅವಮಾನ, ಅಂದಿನ ಸ್ಥಿತಿ ಇವತ್ತಿಲ್ಲದಿರಬಹುದು. ಅಂಬೇಡ್ಕರ್ ಜಗತ್ತಿನ ಹತ್ತು ಹಲವು ಸಂವಿಧಾನ ಓದಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟವರು. ಸಂವಿಧಾನದ ಆಶಯಗಳನ್ನು ನಾವೆಲ್ಲಾ ಉಳಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ, ಶಾಸಕ ಎನ್.ಮಹೇಶ್, ಸಿ.ಎಸ್.ದ್ವಾರಕನಾಥ್ ಉಪಸ್ಥಿತರಿದ್ದರು.