ಕರ್ನಾಟಕ

karnataka

ETV Bharat / state

ಪ್ರಧಾನಿ ನರೇಂದ್ರ ಮೋದಿಯದ್ದು ಬುರುಡೆ ಭಾಷಣ: ಸಿಎಂ ವಾಗ್ದಾಳಿ - undefined

ನಾನು ಇರುವುದು ಕರ್ನಾಟಕ ರಾಜ್ಯದಲ್ಲಿ. ನನಗೂ ಸ್ವಲ್ಪ ತಿಳುವಳಿಕೆ ಇದೆ. ಕುಮಾರಸ್ವಾಮಿ ಬಾಳಿರುವುದು ಕರ್ನಾಟಕದಲ್ಲಿ. ದೇಶದಲ್ಲಿ ಮೋದಿ ಒಬ್ಬರೇ ಅಲ್ಲಾ..?.  ದೇಶಪ್ರೇಮದ ಬಗ್ಗೆ ಮೋದಿಯಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಪ್ರಧಾನಿ ವಿರುದ್ಧ ಸಿಎಂ ವಾಗ್ದಾಳಿ

By

Published : Apr 9, 2019, 6:35 PM IST

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರದ್ದು ಬುರುಡೆ ಭಾಷಣ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿಯವರು ಗೆದ್ದಿದ್ದಾರಾ..?. ಅವರು (ಪ್ರಧಾನಿ) ಹೇಳುವ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಗೆದ್ದಿಲ್ಲ. ಅವರು ಕೇವಲ ಬುರುಡೆ ಭಾಷಣ ಮಾಡಿಕೊಂಡು ಹೋಗಿದ್ದಾರೆ. ಮೋದಿಯವರ ಮಾತಿಗೆ ಉತ್ತರ ಕೊಡೋಕೆ ವಿಷಯವೇ ಇಲ್ಲ. ಅವರು ಬರೀ ಸುಳ್ಳು, ಬುರುಡೆ ಭಾಷಣ ಮಾಡಿಕೊಂಡು ಹೋಗಿದ್ದಾರೆ ಎಂದು ಟೀಕಿಸಿದರು.

ನಾನು ಇರುವುದು ಕರ್ನಾಟಕ ರಾಜ್ಯದಲ್ಲಿ. ನನಗೂ ಸ್ವಲ್ಪ ತಿಳುವಳಿಕೆ ಇದೆ. ಕುಮಾರಸ್ವಾಮಿ ಬಾಳಿರುವುದು ಕರ್ನಾಟಕದಲ್ಲಿ. ಮೋದಿ ಒಬ್ಬರೇ ಅಲ್ಲಾ..?. ದೇಶಪ್ರೇಮದ ಬಗ್ಗೆ ಮೋದಿಯಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದರು.

ಏರ್ ಸ್ಟೈಕ್ ಬಗ್ಗೆ ಇಡೀ ದೇಶ ಮೆಚ್ಚಿದೆ. ಆದರೆ ಪ್ರತಿಪಕ್ಷಗಳು ಮೆಚ್ಚಿಕೊಳ್ಳುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ನರೇಂದ್ರ ‌ಮೋದಿ ಬೆನ್ನು ತಟ್ಟಿಕೊಳ್ಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು.

For All Latest Updates

TAGGED:

ABOUT THE AUTHOR

...view details