ಕರ್ನಾಟಕ

karnataka

ETV Bharat / state

ಅಸ್ವಸ್ಥ ಶಾಸಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿಎಂ,ಡಿಕೆಶಿ - kannada news

ಶಾಸಕ ಬಿ ನಾಗೇಂದ್ರರಿಗೆ ಬಿಎಸ್‌ವೈ ಕರೆಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಇದರಿಂದ ಎಲ್ಲಿ ನಾಂಗೇಂದ್ರ ಕೂಡಾ ಪಕ್ಷಕ್ಕೆ ಗುಡ್ ಬೈ ಹೇಳ್ತಾರೋ ಎನ್ನುವ ಭಯದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಡಿಕೆಶಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಅಸ್ವಸ್ಥ ಶಾಸಕ ಬಿ ನಾಗೇಂದ್ರ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿಎಂ, ಡಿಕೆಶಿ

By

Published : Jul 14, 2019, 5:48 PM IST

ಬೆಂಗಳೂರು : ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಸಿಎಂ ‌ಕುಮಾರಸ್ವಾಮಿ ಹಾಗು ಡಿ.ಕೆ ಶಿವಕುಮಾರ್ ಭೇಟಿ ನೀಡಿ, ಅಸ್ವಸ್ಥ ಕೈ ಶಾಸಕ ಬಿ ನಾಗೇಂದ್ರ ಆರೋಗ್ಯ ವಿಚಾರಿಸಿದರು.

ಶಾಸಕ ನಾಗೇಂದ್ರ ಅಸ್ವಸ್ಥರಾಗಿ ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಸಿಎಂ ಕುಮಾರಸ್ವಾಮಿ ಸಚಿವ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿದ್ರು. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಗೇಂದ್ರರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.

ಅಸ್ವಸ್ಥ ಶಾಸಕ ಬಿ ನಾಗೇಂದ್ರ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿಎಂ, ಡಿಕೆಶಿ

ದೋಸ್ತಿ ನಾಯಕರು ಯಾರೂ ಆರೋಗ್ಯ ವಿಚಾರಿಸಿಲ್ಲ ಎಂದು ಅಸಮಾಧಾನಗೊಂಡಿದ್ದ ಬಿ ನಾಗೇಂದ್ರರಿಗೆ ಬಿಎಸ್‌ವೈ ಕರೆಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಇದರಿಂದ ಎಲ್ಲಿ ನಾಂಗ್ರೇಂದ್ರ ಕೂಡಾ ಪಕ್ಷದಿಂದ ವಿಮುಖರಾಗ್ತಾರೋ ಎಂಬ ಆತಂಕದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಡಿಕೆಶಿ ಆಸ್ಪತ್ರೆಗೆ ಭೇಟಿ ನೀಡಿ, ವಿಶ್ವಾಸಮತ ಯಾಚನೆ ದಿನದಂದು ಸದನಕ್ಕೆ ಬರುವಂತೆ ಬಿ‌.ನಾಗೇಂದ್ರಗೆ ಆಹ್ವಾನ ನೀಡಿದ್ದಾರೆ.

ABOUT THE AUTHOR

...view details