ಬೆಂಗಳೂರು: ಕೆಎಂಎಫ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುವ ಪ್ರೋತ್ಸಾಹ ಧನದ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ವಿತರಣೆ ಮಾಡಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿದ ಸಿಎಂ - ರಾಜ್ಯದಲ್ಲಿ ಒಟ್ಟು 41,711 ಆಶಾ ಕಾರ್ಯಕರ್ತೆಯರು
ರಾಜ್ಯದಲ್ಲಿ ಒಟ್ಟು 41,711 ಆಶಾ ಕಾರ್ಯಕರ್ತೆಯರಿದ್ದು, ಮುಖ್ಯಮಂತ್ರಿಗಳ ಆದೇಶದ ಪ್ರಕಾರ ಸಹಕಾರ ಕ್ಷೇತ್ರ ಲಾಭಾಂಶದಲ್ಲಿರುವ ಸಂಸ್ಥೆಗಳಿಂದ ಒಬ್ಬರಿಗೆ ತಲಾ 3,000 ರೂ.ಗಳಂತೆ ಹಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿದ ಸಿಎಂ
ಅದರಂತೆ ಪ್ರಸ್ತುತ ರಾಜ್ಯದಲ್ಲಿರುವ 41,711 ಕಾರ್ಯಕರ್ತೆಯರಲ್ಲಿ ಮೈಸೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಟ್ಟು 3,110 ಆಶಾ ಕಾರ್ಯಕರ್ತೆಯರಿಗೆ ಒಟ್ಟು ರೂ. 92,36,000 /- ಗಳನ್ನು ವಿತರಿಸಲು ಚೆಕ್ ನೀಡಲಾಯಿತು.
TAGGED:
c m yadiyurappa