ಕರ್ನಾಟಕ

karnataka

ETV Bharat / state

ಬೆಂಗಳೂರು ಟೆಕ್ ಸಮ್ಮಿಟ್​​​ನಲ್ಲಿ ಪಾಲ್ಗೊಳ್ಳಲು ಅಮೆಜಾನ್​ಗೆ ಸಿಎಂ ಆಹ್ವಾನ - ಬೆಂಗಳೂರು ಟೆಕ್ ಸಮ್ಮಿಟ್​ಗೆ ಅಮೆಜಾನ್ ಆಹ್ವಾನಿಸಿದ ಸಿಎಂ

ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. ಹೊಸದಾಗಿ ಹೂಡಿಕೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ನೀತಿ ರೂಪಿಸಿದ್ದೇವೆ ಎಂದು ಸಿಎಂ ಬಿಎಸ್​ವೈ ಹೇಳಿದರು.

cm-invites-amazon-to-participate-in-bengaluru-tech-summit
ಬೆಂಗಳೂರು ಟೆಕ್ ಸಮ್ಮಿಟ್​​​ನಲ್ಲಿ ಪಾಲ್ಗೊಳ್ಳಲು ಅಮೆಜಾನ್​ಗೆ ಸಿಎಂ ಆಹ್ವಾನ

By

Published : Oct 9, 2020, 3:40 AM IST

ಬೆಂಗಳೂರು:ನವೆಂಬರ್ 19ರಿಂದ 25ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಭಾಗವಹಿಸುವಂತೆ ಅಮೆಜಾನ್ ಕಂಪನಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಅಮೆಜಾನ್ ಫುಲ್​ಫಿಲ್​ಮೆಂಟ್ ಸೆಂಟರ್​​ನ್ನು ಆನ್​ಲೈನ್ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸಿಎಂ, ಇ-ಕಾಮರ್ಸ್ ಸೇರಿದಂತೆ ಕಂಪನಿಗಳ ಹೂಡಿಕೆಗೆ ಹಾಗು ಉದ್ದಿಮೆಗಳ ವಿಸ್ತರಣೆಗೆ ಪೂರಕ ವಾತಾವರಣವಿರುವ ರಾಜ್ಯ ನಮ್ಮದಾಗಿದೆ. ಅಮೆಜಾನ್​ನಂತಹ ಇ-ಕಾಮರ್ಸ್ ಕಂಪನಿಗಳ ಘಟಕ ಸ್ಥಾಪನೆಯಿಂದ ಸ್ಥಳೀಯ ಉದ್ಯೋಗಾವಕಾಶ ಹೆಚ್ಚುವ ಜೊತೆಗೆ ಎಂಎಸ್ಎಂಇ ವಲಯದ ಉತ್ಪನ್ನಗಳನ್ನು ದೇಶದ ವಿವಿಧೆಡೆ ಮಾರಾಟ ಮಾಡಲು ಅವಕಾಶ ಲಭ್ಯವಾದಂತಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅಮೆಜಾನ್ ಫುಲ್​ಫಿಲ್​ಮೆಂಟ್ ಸೆಂಟರ್ ಉದ್ಘಾಟನೆ

ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. ಹೊಸದಾಗಿ ಹೂಡಿಕೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ನೀತಿ ರೂಪಿಸಿದ್ದೇವೆ. ಟೈರ್ 2 ಮತ್ತು ಟೈರ್ 3 ಸಿಟಿಗಳಲ್ಲಿ ಉದ್ದಿಮೆಗಳ ಸ್ಥಾಪನೆ ಮಾಡಿ ಅಲ್ಲಿ ಕೈಗಾರಿಕಾ ಕ್ಷೇತದೆದ ಬೆಳವಣಿಗೆ ಆಗಲು ಆದ್ಯತೆ ನೀಡುತ್ತಿದ್ದೇವೆ ಎಂದರು.

ಕೊರೊನಾ ಸಾಂಕ್ರಾಮಿಕದಂತಹ ಈ ಸಮಯದಲ್ಲಿ ಎಂಎಸ್ಎಂಇಗಳು ತಮ್ಮ ಉತ್ಪನ್ನಗಳನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲು ತೆರೆದುಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು.

ಹಲವು ರೀತಿಯ ಭೌಗೋಳಿಕ ಐತಿಹ್ಯವಿರುವ ರಾಜ್ಯ ನಮ್ಮದಾಗಿದೆ, ಹಲವು ಪ್ರಾಚೀನ ಸಂಸ್ಕೃತಿ, ಪರಂಪರೆಯನ್ನು ಹೊಂದಿದೆ. ರಾಜ್ಯದಲ್ಲಿ ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಸೀರೆ, ಮೈಸೂರು ರೇಷ್ಮೆ ಪುರಾತನ ಕಾಲದಿಂದಲೂ ಪ್ರಸಿದ್ದಿಯಾಗಿದೆ. ನಾಡಿನ ಹೆಮ್ಮೆಯಾಗಿರುವ ಈ ಉತ್ಪನ್ನಗಳನ್ನು ಅಮೆಜಾನ್ ಆನ್​ಲೈನ್​ ಮೂಲಕ ವಿದೇಶಗಳಲ್ಲಿ ಮಾರಾಟ ಮಾಡಲಿ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಅಮೆಜಾನ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.

ABOUT THE AUTHOR

...view details