ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಆಯೋಜಿಸಿರುವ 211ನೇ ಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು.
ಲಾಲ್ಬಾಗ್ನಲ್ಲಿ ಗಮನ ಸೆಳೆಯುತ್ತಿದೆ ವಿವೇಕ ಪುಷ್ಪ ಪ್ರದರ್ಶನ
ಲಾಲ್ ಬಾಗ್ನ ಗಾಜಿನ ಮನೆಯಲ್ಲಿ ಕನ್ಯಾ ಕುಮಾರಿಯ ಸಮುದ್ರ ದಂಡೆಯ ಮೇಲಿನ ವಿವೇಕಾನಂದರ ಕಂಚಿನ ಪ್ರತಿಮೆ ಹಾಗೂ ವಿವೇಕಾನಂದರ ಮಂಟಪವನ್ನು ಹೂವಿನ ಮೂಲಕ ನಿರ್ಮಿಸಲಾಗಿದೆ.
ವಿವೇಕ ಪುಷ್ಪ ಪ್ರದರ್ಶನ
ಸ್ವಾಮಿ ವಿವೇಕಾನಂದ ಅವರ 157ನೇ ಜನ್ಮೋತ್ಸವ ಅಂಗವಾಗಿ ವಿವೇಕ ಪುಷ್ಪ ಪ್ರದರ್ಶನ ಅರ್ಪಿತವಾಗಿದೆ. ಲಾಲ್ ಬಾಗ್ನ ಗಾಜಿನ ಮನೆಯಲ್ಲಿ ಕನ್ಯಾ ಕುಮಾರಿಯ ಸಮುದ್ರ ದಂಡೆಯ ಮೇಲಿನ ವಿವೇಕಾನಂದರ ಕಂಚಿನ ಪ್ರತಿಮೆ ಹಾಗೂ ವಿವೇಕಾನಂದರ ಮಂಟಪವನ್ನು ಹೂವಿನ ಮೂಲಕ ನಿರ್ಮಿಸಲಾಗಿದೆ.
ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿವೇಕ ಪುಷ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡಿದ್ದು ತುಂಬ ಸಂತೋಷ ಆಗಿದೆ. ಬೆಂಗಳೂರಿಗರು ಹಾಗೂ ನಾಡಿನ ಎಲ್ಲ ಬಂಧುಗಳು ಬಂದು ಈ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಿ ಎಂದರು.