ಕರ್ನಾಟಕ

karnataka

ETV Bharat / state

ಧರ್ಮಸ್ಥಳದ ಜ್ಞಾನತಾಣ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ...! - CM inauguration Jnanatana program

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನತಾಣ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ಆನ್ ಲೈನ್ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು..

CM inauguration Jnanatana program
ಧರ್ಮಸ್ಥಳದ ಜ್ಞಾನತಾಣ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

By

Published : Nov 9, 2020, 2:36 PM IST

ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮ ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಧರ್ಮಸ್ಥಳದ ಜ್ಞಾನತಾಣ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ..

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನತಾಣ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ಆನ್‌ಲೈನ್ ಮೂಲಕ ಸಿಎಂ ಬಿಎಸ್​ವೈ ಉದ್ಘಾಟಿಸಿದರು.

ನಂತರ ಮಾತನಾಡಿದ ಸಿಎಂ, ಧರ್ಮಸ್ಥಳ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ನೈತಿಕತೆ, ಸರಳತೆ, ಸಾಂಸ್ಕೃತಿಕ ತಾಣವಾಗಿದೆ. ಧರ್ಮಸ್ಥಳ ಕೇವಲ ಸ್ಥಳದ ಹೆಸರಲ್ಲ, ಅದು ಪರಂಪರಾಗತ ದೈವಿಕ ಸಂಕೇತ ಮತ್ತು ವಿಶ್ವಾಸದ ಪ್ರತೀಕ. ಸರ್ವಧರ್ಮ ಸಮನ್ವಯ ಮತ್ತು ಮಾನವ ಜಾತಿ ತಾನೊಂದೇ ವಲಂ ಎನ್ನುವ ಸಂಪ್ರದಾಯವನ್ನು ಶ್ರೀಕ್ಷೇತ್ರದಲ್ಲಿ ಅನುಸರಿಸಿಕೊಂಡು ಬರುತ್ತಿರುವ ಕ್ಷೇತ್ರವಾಗಿದೆ.

ಡಾ. ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಗ್ರಾಮೀಣಾಭಿವೃದ್ಧಿ ಯೋಜನೆ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಪ್ರಾಯೋಜಿತ ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಕಾರ್ಯಕ್ರಮಗಳು, ಕೃಷಿ ತರಬೇತಿ, ಮಹಿಳಾ ವಿಕಾಸ ಕಾರ್ಯಕ್ರಮಗಳು ಸೇರಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಾಡಿನ ಸಮಗ್ರವಾದ ಬೆಳವಣಿಗೆಗಳಿಗೆ ಸರ್ಕಾರದೊಂದಿಗೆ ಯಶಸ್ವಿಯಾಗಿ ಕೈಜೋಡಿಸಿದ ಹೆಗ್ಗಳಿಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರದ್ದಾಗಿದೆ ಎಂದು ಶ್ರೀಕ್ಷೇತ್ರ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಸಿಎಂ ಸ್ಮರಿಸಿದರು.

ಕೊರೊನಾ ವೈರಸ್ ಕಾರಣದಿಂದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಉತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳಲ್ಲಿ ಅಂತರ್ಜಾಲದ ಶಿಕ್ಷಣದ ಮಹತ್ವ ತಿಳಿಸಲು ಜ್ಞಾನತಾಣ ಯೋಜನೆ ಸಹಕಾರಿಯಾಗಲಿದೆ. ಇದರಿಂದಾಗಿ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯುವಂತಾಗಿದೆ. ಒಂದು ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯಿಂದ ಅನುಕೂಲವಾಗಲಿದೆ. 450 ಗೌರವ ಶಿಕ್ಷಕರ ಸೇವೆ ಪಡೆದಿರುವ ಈ ಕಾರ್ಯಕ್ರಮ ನಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿದೆ ಎಂದರು.

ನಾಡಿನಾದ್ಯಂತ ಉತ್ತಮ ಗುಣಮಟ್ಟದ ನೈತಿಕ ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಆಡಳಿತ ಶಿಕ್ಷಣ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಯೋಜನೆಗಳು ಜನರ ಬದುಕನ್ನು ಹಸನಗೊಳಿಸುತ್ತಿವೆ. ಇದು ಧಾರ್ಮಿಕ ಸಂಸ್ಥೆಯಾದರೂ ಸಮಾಜಮುಖಿಯಾಗಿ ಕೆಲಸ ಮಾಡುವುದಕ್ಕೆ ಅಪೂರ್ವವಾದ ಉದಾಹರಣೆ. ಇದು ಜಗತ್ತಿಗೆ ಮಾದರಿಯಲಿ ಎಂದು ಸಿಎಂ ಆಶಿಸಿದರು. ಧರ್ಮಸ್ಥಳದಿಂದ ಆನ್​​​ಲೈನ್ ಮೂಲಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆ ಬಗ್ಗೆ ಮಾತನಾಡಿದರು.

ABOUT THE AUTHOR

...view details