ಕರ್ನಾಟಕ

karnataka

ETV Bharat / state

53 ಸಾವಿರ ಬೀದಿ ಬದಿ ವ್ಯಾಪಾರಿಗಳು, 7,500 ಮೆಟ್ರೋ ಕಾರ್ಮಿಕರಿಗೆ ಲಸಿಕೆ ವಿತರಣೆಗೆ ಚಾಲನೆ - 7,500 ಮೆಟ್ರೋ ಕಾರ್ಮಿಕರಿಗೆ ಲಸಿಕೆ

53,000 ಜನ ಬೀದಿ ಬದಿ ವ್ಯಾಪಾರಿಗಳು ಹಾಗೂ 7,500 ಕಾರ್ಮಿಕರನ್ನು ಗುರುತಿಸಲಾಗಿದ್ದು, ಇಂದಿನಿಂದ ಲಸಿಕೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಘೋಷಣೆ ಮಾಡಿದಂತೆ ಒಬ್ಬೊಬ್ಬರಿಗೂ 2 ಸಾವಿರ ರೂ. ಸಹಾಯ ಧನ ನೀಡಲಾಗುವುದು. ಇದೆಲ್ಲವನ್ನು ಬಳಸಿಕೊಂಡು ಕೋವಿಡ್ ತಡೆಯಲು ಸಹಕರಿಸಬೇಕು ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಲಸಿಕೆ ವಿತರಣೆ
ಲಸಿಕೆ ವಿತರಣೆ

By

Published : May 27, 2021, 7:05 PM IST

ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಮುಂಚೂಣಿ ಕಾರ್ಯಕರ್ತರಾದ 18 - 44 ವರ್ಷದೊಳಗಿನ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಇಂದು ಚಾಲನೆ ನೀಡಿದರು.

ಚಾಲನೆ ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ, 53,000 ಜನ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಇಂದಿನಿಂದ ಲಸಿಕೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಘೋಷಣೆ ಮಾಡಿದಂತೆ ಒಬ್ಬೊಬ್ಬರಿಗೂ 2 ಸಾವಿರ ರೂ. ಸಹಾಯ ಧನ ನೀಡಲಾಗುವುದು. ಇದೆಲ್ಲವನ್ನು ಬಳಸಿಕೊಂಡು ಕೋವಿಡ್ ತಡೆಯಲು ಸಹಕರಿಸಬೇಕು ಎಂದರು.

ಅರ್ಜಿ ಸಲ್ಲಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಇಲ್ಲದವರಿಗೆ, ಆನ್​ಲೈನ್ ಮೂಲಕ ಪತ್ರ ಸಿಗುವ ಹಾಗೆ ಮಾಡಲಾಗುವುದು. ಇದರಿಂದ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಸಿಗುವ ಹಾಗೆ ಮಾಡಲಾಗುವುದು. ನಾಲ್ಕು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂ. ಸಾಲ ನೀಡಲಾಗುವುದು ಎಂದು ಇದೇ ವೇಳೆ ಅವರು ಪ್ರಕಟಿಸಿದರು.

ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ

ಮೆಟ್ರೋ ಕಾರ್ಮಿಕರಿಗೆ ಲಸಿಕೆ
ಬಸವನಗುಡಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಬಡವರು, ಕಾರ್ಮಿಕರಿಗೆ ಆದ್ಯತೆ ಮೇರೆಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದ ಜೊತೆಗೆ ಎರಡು ದಿನಗಳ ಕಾಲ ಮೆಟ್ರೋ ಕಾರ್ಮಿಕರಿಗೂ ಲಸಿಕೆ ನೀಡಲಾಗ್ತಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್, ಎಂಜಿ ರಸ್ತೆ, ಬೈಯಪ್ಪನಹಳ್ಳಿ ಹಾಗೂ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಎರಡು ದಿನಗಳ ಕಾಲ ಲಸಿಕಾ ಕಾರ್ಯಕ್ರಮ ನಡೆಯಲಿದೆ.

6 ಲಸಿಕಾ ಕೇಂದ್ರಗಳಿದ್ದು, ಒಂದೊಂದು ನಿಲ್ದಾಣದಲ್ಲೂ ದಿನಕ್ಕೆ ತಲಾ 900 ಕಾರ್ಮಿಕರಿಗೆ ಸೇರಿದಂತೆ, ಒಟ್ಟು 7,500 ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು. ಹಲವು ಕಂಪನಿಗಳು ಸಿಎಸ್​ಆರ್ ಕಾರ್ಯಕ್ರಮದಡಿ ಲಸಿಕೆ ವಿತರಿಸಲು ಮುಂದೆ ಬಂದಿವೆ. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3,000 ರೂ. ಸಹಾಯಧನ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ಬಿಡಿಎ ಅಧ್ಯಕ್ಷ ವಿಶ್ವನಾಥ್, ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ ಭಾಗಿಯಾಗಿದ್ದರು.

ABOUT THE AUTHOR

...view details