ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಬಿಡ್ತೀನಿ ಎಂದಿಲ್ಲ, ಪಕ್ಷದಲ್ಲಿ ಸಮಸ್ಯೆಗಳಿವೆ ಎಂದಿದ್ದೇನೆ: ಸಿ.ಎಂ.ಇಬ್ರಾಹಿಂ - ಸಿಎಂ ಇಬ್ರಾಹಿಂ ಮನೆಗೆ ಸುರ್ಜೇವಾಲ ಭೇಟಿ

ನಾನು ಕಾಂಗ್ರೆಸ್ ಬೀಡ್ತೀನಿ ಎಂದು ಎಲ್ಲೂ ಹೇಳಿಲ್ಲ, ಸಮಸ್ಯೆಗಳಿವೆ ಎಂದು ಹೇಳಿದ್ದೇನೆ. ಸಮಸ್ಯೆ ಬಗೆಹರಿಸುವ ಬಗ್ಗೆ ಸುರ್ಜೇವಾಲರ ಜೊತೆ ಮಾತನಾಡಿದ್ದೇನೆ. ಮುಂದೆ ವರಿಷ್ಠರನ್ನು ಕೂಡ ಭೇಟಿ ಮಾಡ್ತೀನಿ ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

CM ibrahim reaction about Surjewala's meet
ಸುರ್ಜೇವಾಲ ಭೇಟಿಯ ಕುರಿತು ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

By

Published : Feb 18, 2021, 6:01 PM IST

Updated : Feb 18, 2021, 7:00 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜೊತೆ ಪ್ರಸ್ತುತ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದರು.

ಮಧ್ಯಾಹ್ನ ಭೋಜನಕ್ಕೆ ತಮ್ಮ ನಿವಾಸಕ್ಕೆ ಆಗಮಿಸಿದ್ದ ಸುರ್ಜೇವಾಲಾ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ವಿ. ವ್ಯವಸ್ಥೆಯಲ್ಲಿ ಲೋಪವಿದೆ, ಅದನ್ನ ಸರಿಪಡಿಸಿ ಎಂದು ಹೇಳಿದ್ದೇನೆ ಎಂದರು.

ನಾನು ಕಾಂಗ್ರೆಸ್ ಬೀಡ್ತೀನಿ ಎಂದು ಎಲ್ಲೂ ಹೇಳಿಲ್ಲ, ಸಮಸ್ಯೆಗಳಿವೆ ಎಂದು ಹೇಳಿದ್ದೇನೆ. ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ವರಿಷ್ಠರನ್ನು ಕೂಡ ಭೇಟಿ ಮಾಡ್ತೀನಿ. ನನಗೆ ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯನವರ ಮೇಲೆ ಯಾವುದೇ ಕೋಪವಿಲ್ಲ. ಉಪಚುನಾವಣೆಗಳು ಹೇಗೆ ಸೋತ್ವಿ ಎಂಬುವುದನ್ನು ತಿಳಿಸಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ, ದೇಶದಲ್ಲಿ ಜಾತ್ಯಾತೀತ ಪಕ್ಷಗಳು ಸರ್ಕಾರ ಮಾಡಲು ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ಆಗಿದೆ. ಪಕ್ಷ ಬಿಡುವ ವಿಚಾರವನ್ನು ಅವರು ಕೇಳಿಲ್ಲ, ನಾನೂ ಹೇಳಿಲ್ಲ. ಇದು ಅಪ್ರಸ್ತುತ ಎಂದರು.

Last Updated : Feb 18, 2021, 7:00 PM IST

ABOUT THE AUTHOR

...view details