ಕರ್ನಾಟಕ

karnataka

ETV Bharat / state

ಸಿಎಂ ಗೃಹ ಕಚೇರಿ ಸೀಲ್‌ಡೌನ್ ತೆರವು: ನಾಳೆಯಿಂದ ಕೃಷ್ಣಾದಲ್ಲೇ ಕಾರ್ಯಚಟುವಟಿಕೆ ಆರಂಭ - Sealedown

ಜೂನ್. 25 ರಂದು ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾವನ್ನು ಸೀಲ್​ಡೌನ್ ಮಾಡಲಾಗಿತ್ತು.ಇದೀಗ ಸೀಲ್ ಡೌನ್ ಆಗಿ ಒಂದು ವಾರ ಕಳೆದ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಾಳೆಯಿಂದ ಮುಖ್ಯಮಂತ್ರಿಗಳ ದಿನಚರಿ ಆರಂಭಗೊಳ್ಳಲಿದೆ.

ಸಿಎಂ ಗೃಹ ಕಚೇರಿ ಸೀಲ್‌ಡೌನ್ ತೆರವು
ಸಿಎಂ ಗೃಹ ಕಚೇರಿ ಸೀಲ್‌ಡೌನ್ ತೆರವು

By

Published : Jul 1, 2020, 8:38 PM IST

Updated : Jul 1, 2020, 9:30 PM IST

ಬೆಂಗಳೂರು: ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೀಲ್​​ಡೌನ್ ಆಗಿದ್ದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ, ನಾಳೆಯಿಂದ ಮುಕ್ತಗೊಳ್ಳಲಿದ್ದು ಎಂದಿನಂತೆ ಮತ್ತೆ ಕಾರ್ಯಗಳು ಆರಂಭಗೊಳ್ಳಲಿವೆ.

ಇಬ್ಬರು ಪೊಲೀಸರು ಸೇರಿ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಜೂನ್. 25 ರಂದು ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾವನ್ನು ಸೀಲ್​ಡೌನ್ ಮಾಡಿ, ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು. ಕೃಷ್ಣಾದಲ್ಲಿ ಅಂದು ನಿಗದಿಯಾಗಿದ್ದ ಸಭೆಗಳನ್ನು ಸಿಎಂ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ದರು.

ಸಿಎಂ ಗೃಹ ಕಚೇರಿ ಸೀಲ್‌ಡೌನ್ ತೆರವು

ಜೂನ್. 25 ರಿಂದ ಇಂದಿನವರೆಗೆ ಪ್ರತಿ ನಿತ್ಯ ಗೃಹ ಕಚೇರಿಯಲ್ಲಿ ನಡೆಸಬೇಕಿದ್ದ ಎಲ್ಲ ಸಭೆಗಳನ್ನು ಸಿಎಂ ಬಿ.ಎಸ್‌. ಯಡಿಯೂರಪ್ಪ ವಿಧಾನಸೌಧದಲ್ಲಿ ನಡೆಸಿದ್ದಾರೆ. ನಿಯೋಗಗಳ ಭೇಟಿಯನ್ನು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಡಿದ್ದು, ಸಣ್ಣಪುಟ್ಟ ಸಭೆಗಳನ್ನು ಕೂಡ ನಿವಾಸದಲ್ಲಿಯೇ ನಡೆಸಿದ್ದಾರೆ.

ಇದೀಗ ಸೀಲ್ ಡೌನ್ ಆಗಿ ಒಂದು ವಾರ ಕಳೆದ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಾಳೆಯಿಂದ ಮುಖ್ಯಮಂತ್ರಿಗಳ ದಿನಚರಿ ಆರಂಭಗೊಳ್ಳಲಿದೆ. ನ್ಯಾ. ಹೆಚ್.ಎನ್ ನಾಗಮೋಹನ್ ದಾಸ್ ಆಯೋಗದ ಅಧ್ಯಯನ ವರದಿ ಸಲ್ಲಿಕೆ ಕಾರ್ಯ ನಾಳೆ ಬೆಳಗ್ಗೆ 10.30 ಕ್ಕೆ ನಿಗದಿಯಾಗಿದ್ದು, ಸೀಲ್ ಡೌನ್ ತೆರವು ನಂತರ ಮೊದಲ ಕಾರ್ಯಕ್ರಮ ಇದಾಗಿದೆ.

Last Updated : Jul 1, 2020, 9:30 PM IST

ABOUT THE AUTHOR

...view details