ಬೆಂಗಳೂರು : ಲಾಕ್‌ಡೌನ್ ಜಾರಿಯಾಗಿ ಮೂರು ದಿನಗಳು ಕಳೆದಿವೆ. ಕೋವಿಡ್ ನಿಯಂತ್ರಣ, ಶ್ರಮಿಕರಿಗೆ ನೆರವು ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಚಿವರು ಮತ್ತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಸುರಿಯುವ ಮಳೆಯ ನಡುವೆಯೂ ನಿವಾಸದ ಮುಂಭಾಗದ ಕಾರಿಡಾರ್‌ನ ಹೊರಾಂಗಣದಲ್ಲಿ ಸಿಎಂ ಸಭೆ ನಡೆಸುತ್ತಿದ್ದು, ಲಾಕ್‌ಡೌನ್‌ನ ಮೂರನೇ ದಿನದ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ.