ಬೆಂಗಳೂರು: ಕುಟುಂಬ ಗುರುತಿನ ಚೀಟಿ ನೀಡುವ ಯೋಜನೆ ಕುರಿತಂತೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದರು.
ಕುಟುಂಬ ಗುರುತಿನ ಚೀಟಿ ಯೋಜನೆ: ಅಧಿಕಾರಿಗಳ ಜೊತೆ ಸಿಎಂ ಸಭೆ - ಕುಟುಂಬ ಗುರುತಿನ ಚೀಟಿ ಬಗ್ಗೆ ಸಿಎಂ ಸಭೆ
ಕುಟುಂಬ ಗುರುತಿನ ಚೀಟಿ ಯೋಜನೆ ಕುರಿತು ವಿಸ್ತೃತವಾಗಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಸಿಎಂ, ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದರು.
ಕುಟುಂಬ ಗುರುತಿನ ಚೀಟಿ ಯೋಜನೆ ಕುರಿತು ವಿಸ್ತೃತವಾಗಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಸಿಎಂ, ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದರು. ನಂತರ ಸರ್ಕಾರಿ ಸವಲತ್ತುಗಳ ವಿತರಣೆಗೆ ಕುಟುಂಬ ಗುರುತಿನ ಚೀಟಿ ಹೊಸ ಆಯಾಮ ನೀಡಲಿದ್ದು, ಈ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.