ಕರ್ನಾಟಕ

karnataka

ETV Bharat / state

ಬೇಗ್​ ಜೊತೆ ಇದ್ದ ಬಿಎಸ್​ವೈ ಆಪ್ತ ಸಹಾಯಕ ಸಂತೋಷ್, ಎಸ್​ಐಟಿ ನೋಡಿ ಪರಾರಿ: ಸಿಎಂ ಟ್ವೀಟ್​

ಶಿವಾಜಿನಗ ಶಾಸಕ ರೋಷನ್ ಬೇಗ್​ ‌ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

By

Published : Jul 16, 2019, 8:23 AM IST

Updated : Jul 16, 2019, 9:21 AM IST

ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು:ಐಎಂಐ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಿವಾಜಿನಗರ ಶಾಸಕ ರೋಷನ್​ ಬೇಗ್​ ಅವರನ್ನು ಎಸ್​ಐಟಿ ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ‌.

ಏರ್​ಪೋರ್ಟ್​ನಿಂದ ರೋಷನ್ ಬೇಗ್ ಮುಂಬೈಗೆ ತೆರಳುತ್ತಿದ್ದರು. ‌ಇವರ ಜೊತೆ ಮಾಜಿ‌ ಸಿಎಂ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ​​ಕೂಡ ಇದ್ದರು. ಈ ವಿಚಾರ ತಿಳಿದು ಎಸ್​ಐಟಿ ಏರ್​ಪೋರ್ಟ್​ನತ್ತ ಹೋದಾಗ ಎಸ್​ಐಟಿ ಟೀಂ ಕಂಡ ಕೂಡಲೇ ಸಂತೋಷ್​​ ಅಲ್ಲಿಂದ ಓಡಿ ಹೋಗಿದ್ದಾರೆ.

ಇದೊಂದು ನಾಚಿಕೆಗೇಡಿನ ವಿಚಾರ. ಐಎಂಎ ವಂಚನೆ ಪ್ರಕರಣದ ಆರೋಪ ರೋಷನ್ ಬೇಗ್ ಮೇಲಿದೆ. ಇಂತಹ ಆರೋಪಿ ಸ್ಥಾನದಲ್ಲಿರುವ ಬೇಗ್​ ಜೊತೆ ಬಿಜೆಪಿ ಕೈ ಜೋಡಿಸಿದೆ. ಶಾಸಕರ ಖರೀದಿ ಮೂಲಕ‌ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಸಿಎಂ ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Last Updated : Jul 16, 2019, 9:21 AM IST

ABOUT THE AUTHOR

...view details