ಬೆಂಗಳೂರು:ರಾಣೇಬೆನ್ನೂರು, ಹಿರೇಕೆರೂರಿನನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಕ್ಷೇತ್ರಗಳತ್ತ ಸಿಎಂ ಯಡಿಯೂರಪ್ಪ ತೆರಳಿದರು.
ಕಾಂಗ್ರೆಸ್ನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರತಿನಿಧಿಸುವ ಕ್ಷೇತ್ರ ಹಿರೇಕೆರೂರು, ಪಕ್ಷೇತರ ಅನರ್ಹ ಶಾಸಕ ಆರ್.ಶಂಕರ್ ಪ್ರತಿನಿಧಿಸುವ ಕ್ಷೇತ್ರ ರಾಣೇಬೆನ್ನೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಜಕ್ಕೂರು ಏರೋ ಡ್ರೋಂ ಮೂಲಕ ಸಿಎಂ ಬಿಎಸ್ವೈ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್ನಲ್ಲಿ ತೆರಳಿದ ಸಿಎಂ ಯಡಿಯೂರಪ್ಪ ಜೊತೆಯಲ್ಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ತೆರಳಿದರು.