ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಿಎಂ ಬಜೆಟ್​​​ದೊಳಗೆ ಒತ್ತು ನೀಡಲಿ: ಗದುಗಿನ ಸಿದ್ದರಾಮ ಸ್ವಾಮೀಜಿ - ಗದುಗಿನ ತೋಂಟದಾರ್ಯ ಜಗದ್ಗುರು ಡಾ ಸಿದ್ದರಾಮ ಸ್ವಾಮೀಜಿ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪದಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದರೂ ಇಲ್ಲಿಯವರೆಗೆ ಅನುದಾನ ಬಂದಿಲ್ಲ. ಈ ಭಾಗದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಸರಕಾರ ಕಪ್ಪದಗುಡ್ಡದ ರಕ್ಷಣೆಗೆ ಮುಂದಾಗಬೇಕು - ಗದುಗಿನ ತೋಂಟದಾರ್ಯ ಜಗದ್ಗುರು ಡಾ ಸಿದ್ದರಾಮ ಸ್ವಾಮೀಜಿ ಆಗ್ರಹ.

Tontadarya Siddarama Swamiji spoke
ಗದುಗಿನ ತೋಂಟದಾರ್ಯ ಜಗದ್ಗುರು ಡಾ ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

By

Published : Feb 15, 2023, 3:28 PM IST

ಬೆಳಗಾವಿ: ಈ ಬಾರಿ ರಾಜ್ಯ ಬಜೆಟ್​​ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಬೇಕು. ಈ ಭಾಗದ ಜನರಲ್ಲಿ ಪ್ರತ್ಯೇಕತೆ ಕೂಗು ಬಾರದಂತೆ ನೋಡಿಕೊಂಡು ವಿಶೇಷ ಬಜೆಟ್ ಮಂಡಿಸಬೇಕು ಎಂದು ಗದುಗಿನ ತೋಂಟದಾರ್ಯ ಜಗದ್ಗುರು ಡಾ ಸಿದ್ದರಾಮ ಸ್ವಾಮೀಜಿ ಅವರು ಸಲಹೆ ನೀಡಿದರು.

ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ ಆಗಲಿ:ಬುಧವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ಸಾಕಷ್ಟು ವಿಚಾರಗಳನ್ನು ಇಡುತ್ತ ಬಂದಿದ್ದೇವೆ.ಅವು ಸಾಕರಗೊಳ್ಳದಿರುವುದು ವಿಪರ್ಯಾಸ. ಸುಮಾರು 400 ಕೋಟಿ ರೂ. ಖರ್ಚು ಮಾಡಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಿದ್ದಾರೆ.

ಅದು ಅಧಿವೇಶನದಲ್ಲಿ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ. ಬಾಕಿ ದಿನ ಖಾಲಿ ಉಳಿಯುತ್ತದೆ. ಆದ್ದರಿಂದ ಉತ್ತರ ಕರ್ನಾಟಕಕ್ಕೆ ಅಗತ್ಯವಿರುವ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಹಾಗೂ ಪೂರ್ಣ ಪ್ರಮಾಣದ ಅಧಿವೇಶನವನ್ನು ಇಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ ಭಾಗದ ಸರ್ಕಾರಿ ಕಚೇರಿಗಳು ಹುಧಾಗೆ ಬೇಡ:ಗಡಿಭಾಗದ ಜಿಲ್ಲೆಗಳಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಧನ ಸಹಾಯವನ್ನು ಸರ್ಕಾರ ಮಾಡಬೇಕು.ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಚುನಾವಣೆ ಬಂದಾಗ ಮಾತ್ರ ಗಡಿ ಭಾಗದ ವಿಷಯದ ಕಾವು ಜೋರಾಗಿ ಪಡೆದುಕೊಳ್ಳುತ್ತದೆ. ಉತ್ತರ ಕರ್ನಾಟಕ ಅಂದರೆ ಹುಬ್ಬಳ್ಳಿ- ಧಾರವಾಡ ಎಂದುಕೊಂಡಿದ್ದಾರೆ. ಇದು ತಪ್ಪು, ಗಡಿ ಭಾಗದಲ್ಲಿ ಕನ್ನಡ ಉಳಿಸುವ ಕೆಲಸ ಮಾಡುತ್ತಿರುವುದು ಬೆಳಗಾವಿ. ಬೆಳಗಾವಿ ಭಾಗದ ಸರ್ಕಾರಿ ಕಚೇರಿಗಳು ಸಹ ಹುಬ್ಬಳ್ಳಿ- ಧಾರವಾಡ ಪಾಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಶಾಲೆಗಳ ಶೈಕ್ಷಣಿಕ ಗುಣಮಟ್ಟತೆ ಹೆಚ್ಚಿಸಲಿ:ಗಡಿ ಭಾಗದಲ್ಲಿ ಗುಣಮಟ್ಟದ ಶೈಕ್ಷಣಿಕ ಕನ್ನಡ ಶಾಲೆಯನ್ನು ತೆರೆಯುವ ಕೆಲಸವಾಗಬೇಕು.ಹೆಚ್ಚು ಕನ್ನಡ ಭಾಷೆಯ ಶಾಲೆಯನ್ನು ತೆರೆದರೆ ಗಡಿ ಭಾಗದಲ್ಲಿ ಕನ್ನಡ ಉಳಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲಿಷ್ ಶಾಲೆಗೆ ಹೋಗುವ ಪರಿಸ್ಥಿತಿ ಬಂದಿದೆ. ಕನ್ನಡ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಅಗತ್ಯ ಇದೆ ಎಂದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಆದ್ದರಿಂದ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಟ್ಟುಕೊಂಡಿರುವ ಈ ಭಾಗದ ಜನರು ಕರ್ನಾಟಕ ಏಕೀಕರಣ ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತ್ಯೇಕತೆ ಕೂಗು ಬಾರದಂತೆ ಸರ್ಕಾರ ಗಮನ ಹರಿಸಬೇಕು ಎಂದ ಸಲಹೆ ನೀಡಿದರು.

ಉಕ ಕರ್ನಾಟಕ ಅಭಿವೃದ್ದಿಗೆ ಆಯೋಗ ಅವಶ್ಯ:ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಆಯೋಗ ರಚನೆ ಮಾಡಿ, ಯೋಜನೆ ರೂಪಿಸಿಕೊಳ್ಳಬೇಕು.‌ ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಿಲ್ಲ. ವ್ಯಸನಮುಕ್ತ ಸಮಾಜ ಉಳಿಯಬೇಕಿದ್ದರೆ ಮದ್ಯಪಾನ ನಿಷೇಧ ಮಾಡಬೇಕು. ಸರ್ಕಾರ ಅಕ್ರಮ ಸರಾಯಿ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.
ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪದಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದರೂ ಇಲ್ಲಿಯವರೆಗೆ ಅನುದಾನ ಬಂದಿಲ್ಲ. ಈ ಭಾಗದಲ್ಲಿ ಗಣಿಗಾರಿಕೆ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ. ಸರಕಾರ ಕಪ್ಪದಗುಡ್ಡದ ರಕ್ಷಣೆ ಮಾಡಲು ಬದ್ಧವಾಗಬೇಕು ಎಂದು ಆಗ್ರಹಿಸಿದರು.


ಹುಬ್ಬಳ್ಳಿ ಬೆಳಗಾವಿ ರೈಲು ಮಾರ್ಗ ಶೀಘ್ರ ಅನುಷ್ಠಾನಗೊಳ್ಳಲಿ:ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಿತ್ತೂರ ಮಾರ್ಗದಲ್ಲಿ ರೈಲ್ವೆ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು.ಹಿಡಕಲ್ ಡ್ಯಾಮ್ ನ ಹಿನ್ನೀರು ಪ್ರದೇಶದಲ್ಲಿ ಬೃಹತ್ ಬಸವೇಶ್ವರರ ಪ್ರತಿಮೆ ಸ್ಥಾಪನೆ ಮಾಡಬೇಕು. ಇದಕ್ಕೆ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದು ಸಕಾರಾತ್ಮಕ ಸ್ಪಂದಿಸಿದ್ದಾರೆ. ಇದಕ್ಕೆ ಬರುವ ಬಜೆಟ್ ನಲ್ಲಿ ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದರು.
ಇದನ್ನೂ ಓದಿ:ಪುರಾತನ 3 ಸಾವಿರ ಶಿವನ ದೇವಾಲಯಗಳಿಗೆ ಹರಿದ್ವಾರದಿಂದ ತಂದ ಪವಿತ್ರ ಗಂಗಾ ಜಲ ವಿತರಣೆ

ABOUT THE AUTHOR

...view details