ಬೆಂಗಳೂರು:ಎಸ್ಐ ಮತ್ತು ಪೊಲೀಸ್ ಪೇದೆಗಳ ನೇಮಕಾತಿ ವಯೋಮಾನ ಸಡಿಲಿಕೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ 16 ಸಾವಿರ ಎಸ್ಐ ಮತ್ತು ಪೊಲೀಸ್ ಪೇದೆಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಈ ಸಂಬಂಧ ಬಿಜೆಪಿ ನಿಯೋಗ ಸಿಎಂ ಮತ್ತು ಗೃಹ ಸಚಿವರಿಗೆ ಭೇಟಿ ಮಾಡಿ ವಯೋಮಿತಿ ಸಡಿಲಿಕೆ ಮಾಡಲು ಮನವಿ ಸಲ್ಲಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೆ ಬೇರೆ ಬೇರೆ ವಯೋಮಿತಿ ನಿಗದಿ ಇದೆ. ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗಕ್ಕೆ 25, ಒಬಿಸಿ - 27, ಎಸ್ಸಿ ಎಸ್ಟಿ ವರ್ಗಕ್ಕೆ 27 ವಯೋಮಿತಿ ಇದೆ ಹೀಗಾಗಿ ವಯೋಮಿತಿ ಹೆಚ್ಚಳ ಮಾಡಲು ನಮ್ಮ ನಿಯೋಗ ಮನವಿ ಮಾಡಿಕೊಂಡಿದೆ. ಸಾಮಾನ್ಯ 28, ಒಬಿಸಿ ಮತ್ತು ಎಸ್ಸಿ ಎಸ್ಟಿ ವರ್ಗಗಳಿಗೆ 33 ವರ್ಷ ವಯೋಮಿತಿ ನಿಗದಿಗೆ ಮನವಿ ಮಾಡಿದ್ದು, ವಯೋಮಿತಿ ಹೆಚ್ಚಳಕ್ಕೆ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.