ಕರ್ನಾಟಕ

karnataka

ETV Bharat / state

ಶಾಸನಕನಾಗಿ ಜವಾಬ್ದಾರಿ ಬೇಡವೇ: ರೇಣುಕಾಚಾರ್ಯಗೆ ಸಿಎಂ ಕ್ಲಾಸ್​ - ಶಾಸಕ ಎಂ.ಪಿ ರೇಣುಕಾಚಾರ್ಯ

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಿ ಸಭೆ ನಡೆಸಿದ್ದ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.

dsedd
ಸಾಮಾಜಿಕ ಅಂತರ ಉಲ್ಲಂಘಿಸಿದ್ದ ರೇಣುಕಾಚಾರ್ಯಗೆ ಸಿಎಂ ಕ್ಲಾಸ್​!

By

Published : Apr 26, 2020, 3:57 PM IST

ಬೆಂಗಳೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘನೆ ಮಾಡಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ.

ಸಾಮಾಜಿಕ‌ ಅಂತರ‌ ಕಾಯ್ದುಕೊಳ್ಳದೆ ಆಶಾ ಕಾರ್ಯಕರ್ತೆಯರ ಸಭೆ‌ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಅವರು ರೇಣುಕಾಚಾರ್ಯಗೆ ಕರೆ ಮಾಡಿ ಏನು‌ ಮಾಡುತ್ತಿದ್ದೀಯ ನೀನು‌ ಅಂತ ಪ್ರಶ್ನಿಸಿದ್ದಾರೆ.

ಇಡೀ ‌ದೇಶವೇ ಸಾಮಾಜಿಕ‌‌ ಅಂತರದ ಬಗ್ಗೆ ಮಾತನಾಡುತ್ತಿದ್ದರೆ ನೀನು‌ ಮಾತ್ರ ಅದನ್ನು ಕಾಪಾಡಿಕೊಳ್ಳದೆ ಸಭೆ ಮಾಡಿದ್ದೀಯ. ಶಾಸಕನಾಗಿ‌ ಜವಾಬ್ದಾರಿ ಬೇಡವೇ? ಇದೇ ಕೊನೆಯ ಎಚ್ಚರಿಕೆ. ಇನ್ನೊಮ್ಮೆ‌ ಮರುಕಳಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ABOUT THE AUTHOR

...view details