ಕರ್ನಾಟಕ

karnataka

ETV Bharat / state

ಕೊರೊನಾ ರಹಿತ ಜಿಲ್ಲೆಗಳಿಂದಲೂ ವೈದ್ಯಕೀಯ ಸ್ಯಾಂಪಲ್ ಕಳುಹಿಸಿ: ಡಿಸಿಗಳಿಗೆ ಸಿಎಸ್ ಸೂಚನೆ - corona lock down

ಕೋವಿಡ್​ 19 ರಹಿತ ಜಿಲ್ಲೆಗಳಿಂದಲೂ ರೋಗದ ಲಕ್ಷಣ ಇರುವ ಸ್ಯಾಂಪಲ್​ ಅನ್ನು ಅಧಿಕೃತ ಕೋವಿಡ್ 19 ತಪಾಸಣಾ ಪ್ರಯೋಗಾಲಯಗಳಿಗೆ ಏ.17, 18, 19ಕ್ಕೆ ಕಳುಹಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬರೆದ ಪತ್ರ
ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬರೆದ ಪತ್ರ

By

Published : Apr 18, 2020, 8:41 AM IST

ಬೆಂಗಳೂರು: ಕೊರೊನಾ ಸೋಂಕು ಕಾಣಿಸದ ಜಿಲ್ಲೆಗಳಲ್ಲೂ ವೈದ್ಯಕೀಯ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಕೊರೊನಾ ಪ್ರಕರಣ ಪತ್ತೆಯಾಗದ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಕೋಲಾರ, ರಾಮನಗರ, ಚಿಕ್ಕಮಗಳೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಪತ್ರ ಬರೆದಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬರೆದ ಪತ್ರ
ಪತ್ರದಲ್ಲಿ ತಮ್ಮ ಜಿಲ್ಲೆಗಳಲ್ಲಿ ಸೋಂಕು ಕಾಣಿಸದೇ ಇರುವುದು ಸಮಾಧಾನದ ಸಂಗತಿ. ಆದರೆ, ತಜ್ಞರ ಪ್ರಕಾರ ಕೋವಿಡ್ 19 ಲಕ್ಷಣ ಕಾಣದಿದ್ದರೂ ಸೋಂಕು ಇರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆ ಇಂದಿನಿಂದ ನಿತ್ಯ ಇನ್ಫ್ಲುಯೆನ್ಜಾ ಮತ್ತು ಅಸ್ವಸ್ಥತೆ ರೋಗದ ಲಕ್ಷಣ ಇರುವ ಕನಿಷ್ಠ 100 ವೈದ್ಯಕೀಯ ಸ್ಯಾಂಪಲ್ ಗಳನ್ನು ಪಡೆಯುವಂತೆ ಸೂಚನೆ ನೀಡಿದ್ದಾರೆ. ಆ ಸ್ಯಾಂಪಲ್​ ಅನ್ನು ಅಧಿಕೃತ ಕೋವಿಡ್ 19 ತಪಾಸಣಾ ಪ್ರಯೋಗಾಲಯಗಳಿಗೆ ಏ.17, 18, 19ಕ್ಕೆ ಕಳುಹಿಸಿಕೊಡುವಂತೆ ನಿರ್ದೇಶನ ನೀಡಿದ್ದಾರೆ. ಬಳಿಕ ದಿನಕ್ಕೆ 50ರಂತೆ ನಿತ್ಯ ಇಂತಹ ವೈದ್ಯಕೀಯ ತಪಾಸಣೆಯನ್ನು ಪರೀಕ್ಷೆಗೆ ಕಳುಹಿಸಿಕೊಡುವಂತೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details