ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದೇ ದಿನದಲ್ಲಿ ಎರಡು ಬಾರಿ ನೀತಿ ಸಂಹಿತೆಯ ಬಿಸಿ ತಟ್ಟಿದೆ. ಬೆಳಗ್ಗೆಯಷ್ಟೇ ಒಮ್ಮೆ ಸಿಎಂ ಕಾರು ತಪಾಸಣೆ ಮಾಡಿದ್ದ ಚುನಾವಣಾ ಆಯೋಗದ ಅಧಿಕಾರಿಗಳು ಸಂಜೆ ಮತ್ತೊಮ್ಮೆ ತಪಾಸಣೆ ನಡೆಸಿದ್ದಾರೆ.
ಯಶವಂತಪುರದಲ್ಲೂ ಸಿಎಂ ಕಾರು ತಪಾಸಣೆ! - ಹೊಸಕೋಟೆಗೆ ತೆರಳುತ್ತಿದ್ದ ಸಿಎಂ ಕಾರನ್ನ ತಪಾಸಣೆ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು
ಬೆಳಿಗ್ಗೆಯಷ್ಟೇ ಹೊಸಕೋಟೆಗೆ ತೆರಳುತ್ತಿದ್ದ ಸಿಎಂ ಕಾರನ್ನು ಮಂಚೇನಹಳ್ಳಿ ಬಳಿ ತಡೆದು ತಪಾಸಣೆ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು,ಮತ್ತೊಮ್ಮೆ ತಪಾಸಣೆ ನಡೆಸಿರುವ ಘಟನೆ ನಡೆದಿದೆ.
![ಯಶವಂತಪುರದಲ್ಲೂ ಸಿಎಂ ಕಾರು ತಪಾಸಣೆ! cm-car-inspection-in-yeshwanthpur-by-election-commission-officials](https://etvbharatimages.akamaized.net/etvbharat/prod-images/768-512-5187887-thumbnail-3x2-sanju.jpg)
ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಪರ ಗೊಲ್ಲರಹಟ್ಟಿಯ ನೈಸ್ ರಸ್ತೆಯಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ರೋಡ್ ಶೋ ನಡೆಸಲು ಆಗಮಿಸಿದ ವೇಳೆ ಗೊಲ್ಲರಹಟ್ಟಿಯ ನೈಸ್ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಸಿಎಂ ಕಾರನ್ನು ಚುನಾವಣಾ ಅಧಿಕಾರಿಗಳು ತಡೆದರು. ಇಲ್ಲಿ ಸಿಎಂ ಖಾಸಗಿ ಕಾರನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು. ಎರಡನೇ ಬಾರಿ ಕಾರು ತಪಾಸಣೆ ಮಾಡುತ್ತಿದ್ದರೂ ಸಿಡಿಮಿಡಿಗೊಳ್ಳದ ಸಿಎಂ ಕಾರಿನಲ್ಲಿ ಕುಳಿತೇ ಸಹಕಾರ ನೀಡಿದರು.
ತಪಾಸಣೆ ಪೂರ್ಣಗೊಂಡ ನಂತರವೇ ಚೆಕ್ ಪೋಸ್ಟ್ ನಿಂದ ಮುಂದೆ ಹೋಗಲು ಅನುಮತಿ ನೀಡಲಾಯಿತು.ಬೆಳಿಗ್ಗೆಯಷ್ಟೇ ಹೊಸಕೋಟೆಗೆ ತೆರಳುತ್ತಿದ್ದ ಸಿಎಂ ಕಾರನ್ನು ಮಂಚೇನಹಳ್ಳಿ ಬಳಿ ತಡೆದು ತಪಾಸಣೆ ನಡೆಸಲಾಗಿತ್ತು.