ಬೆಂಗಳೂರು: ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಅಂತಿಮಗೊಂಡ ಬೆನ್ನಲ್ಲೇ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಿದರು.
ರಾಣೆಬೆನ್ನೂರು ಕ್ಷೇತ್ರದ ಚುನಾವಣೆ ಸಿದ್ಧತೆ ಬಗ್ಗೆ ಸಭೆ ನಡೆಸಿದ ಸಿಎಂ - cm meeting in bangalore
ರಾಣೆಬೆನ್ನೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಅರುಣ್ ಕುಮಾರ್ ಗುತಲ್ ಹೆಸರು ಘೋಷಣೆಯಾಗಿದ್ದು, ಚುನಾವಣೆ ಸಿದ್ಧತೆ ಕುರಿತು ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು.
ಕ್ಷೇತ್ರದ ಚುನಾವಣಾ ಉಸ್ತವಾರಿಯಾಗಿರುವ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿ ಅರುಣ್ ಕುಮಾರ್ರನ್ನು ಗೆಲ್ಲಿಸುವ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಕೋಳಿವಾಡರನ್ನ ಸೋಲಿಸಿ, ಅರುಣ್ ಕುಮಾರ್ ಗುತ್ತಲ್(ಪೂಜಾರ್) ಗೆಲ್ಲಿಸುವ ಬಗ್ಗೆ ರಣತಂತ್ರ ರೂಪಿಸುವಂತೆ ಸೂಚಿಸಿದ ಸಿಎಂ, ಇವತ್ತಿನಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಂತರ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಮಾಧುಸ್ವಾಮಿ, ಸೋಮಣ್ಣ ಅವರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ, ಉಪ ಚುನಾವಣೆ ಸಿದ್ದತೆ ಕುರಿತು ಮಾತುಕತೆ ನಡೆಸಿದರು.
TAGGED:
ಬೆಂಗಳೂರಿನಲ್ಲಿ ಸಿಎಂ ಸಭೆ