ಕರ್ನಾಟಕ

karnataka

ETV Bharat / state

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ: ರೈತರ ಸಂಕಷ್ಟ ಕುರಿತು ಚರ್ಚೆ - CM Call emergency meeting

ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಪಾರು ಮಾಡಲು ಸಿಎಂ ಸಭೆ ಕರೆದಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ

By

Published : Apr 1, 2020, 11:06 AM IST

ಬೆಂಗಳೂರು: ಕೊರೊನಾ ಲಾಕ್‌ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳ ಕುರಿತ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ.
ರೈತರು ತಾವು ಬೆಳೆದ ಬೆಳೆಗಳ ನಾಶಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಗೆ ತರಲಾಗದೆ ಬೆಳೆಗಳು ಮಣ್ಣು ಪಾಲಾಗುತ್ತಿದೆ. ಟೊಮ್ಯಾಟೊ, ಕರಬೂಜ, ಪೈನಾಪಲ್, ಸಪೋಟ, ದ್ರಾಕ್ಷಿ, ಕಲ್ಲಂಗಡಿ ಸೇರಿ ಅನೇಕ ಬೆಳೆಯನ್ನು ನಾಶವಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ಅನುಕೂಲ ಇಲ್ಲ. ಆದ್ರೆ, ಮಾರುಕಟ್ಟೆಗೆ ಸಾಗಿಸಿದ್ರೂ ಸೂಕ್ತ ದರ ಸಿಗುತ್ತಿಲ್ಲ. ಹೀಗಾಗಿ ಕೆರೆ, ಕಾಲುವೆಗೆ ಬೆಳೆ ಸುರಿಯಲಾಗುತ್ತಿದೆ. ಈ ಎಲ್ಲಾ ಕಾರಣಗಳು ಮತ್ತು ರೈತರು ನಷ್ಟದಲ್ಲಿದ್ದು, ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಎಂ‌ ತುರ್ತು ಸಭೆ ಕರೆದಿದ್ದಾರೆ.
ಬೆಳಗ್ಗೆ 10.30 ಕ್ಕೆ ನಡೆಯುವ ಸಭೆಗೆ ಕೃಷಿಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಹಾಜರಿರಲು ಸೂಚನೆ ನೀಡಲಾಗಿದೆ.

ABOUT THE AUTHOR

...view details