ಕರ್ನಾಟಕ

karnataka

ETV Bharat / state

ಸಿಡಿ ಕುರಿತು ತನಿಖೆಯ ಬಗ್ಗೆ ಸಂಜೆಯೊಳಗೆ ಸ್ಪಷ್ಟ ನಿರ್ಧಾರ : ಸಿಎಂ ಬಿಎಸ್​ವೈ - ರಮೇಶ್ ಜಾರಕಿಹೊಳಿ ಸಿಡಿ ವಿವಾದ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿವಾದದ ಕುರಿತು ತನಿಖೆ ನಡೆಸುವ ಬಗ್ಗೆ ಸಿಎಂ ಬಿಎಸ್​ವೈ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಗೃಹ ಸಚಿವರು ನಿರ್ಧರಿಸುವುದಾಗಿ ತಿಳಿಸಿದ್ದಾರೆ.

CM BSY's reaction on investigating the CD Issue
ಸಿಡಿ ಕುರಿತು ತನಿಖೆ ನಡೆಸುವ ಬಗ್ಗೆ ಸಿಎಂ ಬಿಎಸ್​ವೈ ಪ್ರತಿಕ್ರಿಯೆ

By

Published : Mar 10, 2021, 3:26 PM IST

ಬೆಂಗಳೂರು : ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಅಶ್ಲೀಲ ಸಿಡಿಯ ಕುರಿತು ತನಿಖೆ ನಡೆಸುವ ಬಗ್ಗೆ ಇಂದು ಸಂಜೆಯೊಳಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

​ಎಫ್.ಕೆ.ಸಿ.ಸಿ.ಐ ಮಹಿಳಾ ಉದ್ಯಮಿಗಳ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ವಿವಾದದ ಸತ್ಯಾ ಸತ್ಯತೆಯ ಬಗ್ಗೆ ತನಿಖೆ ನಡೆಸುವಂತೆ ರಮೇಶ್ ಜಾರಕಿಹೊಳಿ ನಿನ್ನೆ ಮನವಿ ಪತ್ರ ಕೊಟ್ಟಿದ್ದಾರೆ. ಹೀಗಾಗಿ, ಸಿಡಿ ಕುರಿತು ತನಿಖೆ ನಡೆಸುವ ಬಗ್ಗೆ ಗೃಹ ಸಚಿವರು ಇಂದು ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಓದಿ : ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೊರೆ ಹೋಗಲ್ಲ: ಎಂಟಿಬಿ ನಾಗರಾಜ್

ಆರು ಜನ ಸಚಿವರು ಕೋರ್ಟ್ ‌ಮೊರೆ ಹೋಗಿರುವುದು ಮತ್ತು ಕಾಂಗ್ರೆಸ್ ಪ್ರತಿಭಟನೆ‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಡಿ ಪ್ರಕರಣ ಮತ್ತು ಇನ್ನುಳಿದ ಪ್ರಶ್ನೆಗಳಿಗೆ ಗೃಹ ಇಲಾಖೆಯಿಂದ ಉತ್ತರ ಸಿಗಲಿದೆ ಎಂದು ತಿಳಿಸಿದರು.

ABOUT THE AUTHOR

...view details