ಕರ್ನಾಟಕ

karnataka

ETV Bharat / state

ಚರ್ಚೆ ಬಳಿಕ ಮಂಗಳೂರು ಗೋಲಿಬಾರ್​​​​ ಪ್ರಕರಣದ ತನಿಖೆ ಬಗ್ಗೆ ನಿರ್ಧಾರ: ಸಿಎಂ ಬಿಎಸ್​ವೈ - ಮಂಗಳೂರು ಗೋಲಿಬಾರ್ ಕುರಿತು ಸಿಎಂ ಹೇಳಿಕೆ

ಮಂಗಳೂರಿನಲ್ಲಿ ಕರ್ಫ್ಯೂ ಜಾರಿ ಹಿನ್ನೆಲೆ ಜಿಲ್ಲೆಯ ಸ್ಥಿತಿಗತಿಗಳನ್ನು ಅವಲೋಕಿಸಲು ಸಿಎಂ ಯಡಿಯೂರಪ್ಪ ಮಂಗಳೂರಿಗೆ ಪ್ರಯಾಣ ಬೆಳೆಸಿದರು.‌ ಸಿಎಂ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಡಿಸಿಎಂ ಗೋವಿಂದ ಕಾರಜೋಳ ಸಹ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ‌.

Cಮಂಗಳೂರು ಗೋಲಿಬಾರ್ ಕುರಿತು ಸಿಎಂ ಹೇಳಿಕೆ, M BSYadiyurappa Travel to Mangalore
ಸಿಎಂ ಬಿಎಸ್​ವೈ

By

Published : Dec 21, 2019, 11:27 AM IST

ಬೆಂಗಳೂರು:ಮಂಗಳೂರಿನಲ್ಲಿ ಕರ್ಫ್ಯೂ ಜಾರಿ ಹಿನ್ನೆಲೆ ಜಿಲ್ಲೆಯ ಸ್ಥಿತಿಗತಿಗಳನ್ನು ಅವಲೋಕಿಸಲು ಸಿಎಂ ಯಡಿಯೂರಪ್ಪ ಮಂಗಳೂರಿಗೆ ಪ್ರಯಾಣ ಬೆಳೆಸಿದರು.‌ ಸಿಎಂ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಡಿಸಿಎಂ ಗೋವಿಂದ ಕಾರಜೋಳ ಸಹ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ‌.

ಸಿಎಂ ಯಡಿಯೂರಪ್ಪ

ಇನ್ನು ಇದಕ್ಕೂ ಮುನ್ನ ಮಾತಾನಾಡಿದ ಸಿಎಂ ಯಡಿಯೂರಪ್ಪ, ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ಮಾಡುತ್ತೇವೆ. ಗೋಲಿಬಾರ್ ಪ್ರಕರಣ ತನಿಖೆಗೆ ಕೊಡುವ ಬಗ್ಗೆ ಅಲ್ಲಿ ಹೋದ ಮೇಲೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಿದ್ದರಾಮಯ್ಯರಿಗೆ ನಿರ್ಬಂಧ ಹೇರಬೇಕು ಅನ್ನೋ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೇಜಾವರ ಶ್ರೀಗಳ ಅನಾರೋಗ್ಯ ವಿಚಾರವಾಗಿ ಮಾತನಾಡಿದ ಬಿಎಸ್​ವೈ, ಶ್ರೀಕೃಷ್ಣನ ದಯೆಯಿಂದ ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆ ಆಗಿದೆ.‌ ಮೊದಲು ಮಂಗಳೂರಿಗೆ ಭೇಟಿ ನೀಡಲಿದ್ದೇವೆ.‌ ಆ ಬಳಿಕ ಉಡುಪಿಗೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಮಾತಾನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಮತ್ತು ಮಂಗಳೂರಿನಲ್ಲಿ ಶಾಂತಿ‌ ನೆಲೆಸಬೇಕು. ಅದಕ್ಕಾಗಿ ಇವತ್ತು ಸಿಎಂ ಮಂಗಳೂರಿಗೆ ಹೋಗಿ ಸಭೆ ಮಾಡುತ್ತಿದ್ದಾರೆ‌. ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಇಂಥ ಸಂದರ್ಭದಲ್ಲಿ ಯಾವ ನಾಯಕರು ಅಲ್ಲಿಗೆ ಹೋಗುವಂತಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ನೋಟಿಸ್​ ಕೊಟ್ಟಿರಬಹುದು ಎಂದರು.

ABOUT THE AUTHOR

...view details