ಕರ್ನಾಟಕ

karnataka

ETV Bharat / state

ನಾಳೆ ಬೆಳಗಾವಿಗೆ ಸಿಎಂ: ಉಪಚುನಾವಣಾ ಪ್ರಚಾರ ಕಣಕ್ಕೆ ಎಂಟ್ರಿ - ಲೋಕಸಭಾ ಕ್ಷೇತ್ರದ ಚುನಾವಣೆ

ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ನಾಳೆ ಸಂಜೆ ಬೆಳಗಾವಿಗೆ ಸಿಎಂ ಯಡಿಯೂರಪ್ಪ ಪ್ರವಾಸ ಕೈಗೊಳ್ಳುತ್ತಿದ್ದಾರೆ.

CM BSY
ಬೆಳಗಾವಿಗೆ ಸಿಎಂ ಪ್ರವಾಸ

By

Published : Apr 5, 2021, 1:41 PM IST

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರ, ಒಂದು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಉಪಚುನಾವಣಾ ಪ್ರಚಾರದ ಕಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧುಮುಕುತ್ತಿದ್ದಾರೆ.

ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಸಂಜೆ ಬೆಳಗಾವಿಗೆ ಸಿಎಂ ಯಡಿಯೂರಪ್ಪ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಬುಧವಾರ ಬೆಳಗಾವಿಯ ಹಿರೇಬಾಗೇವಾಡಿ, ಯರಗಟ್ಟಿ, ಮುರುಗೋಡ ಮತ್ತು ಸಾಲಹಳ್ಳಿಯಲ್ಲಿ ಯಡಿಯೂರಪ್ಪ ಪ್ರಚಾರ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರ ಮತಯಾಚನೆ ಮಾಡಲಿದ್ದಾರೆ.

ಅಂದು ಸಂಜೆಯೇ ಬೆಂಗಳೂರಿಗೆ ವಾಪಸ್ಸಾಗಲಿರುವ ಸಿಎಂ, ಅಧಿಕೃತ ಕಾರ್ಯಕ್ರಮದ ನಿಮಿತ್ತ ಏಪ್ರಿಲ್ 8,9 ರಂದು ಎರಡು ದಿನಗಳ ಕಾಲ ಮಂಗಳೂರು ಪ್ರವಾಸದಲ್ಲಿರಲಿದ್ದಾರೆ. ನಂತರ ಮತ್ತೆ ಉಪ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮೇ ಅಂತ್ಯದವರೆಗೆ ಕೋವಿಡ್ ಸ್ಫೋಟವಾಗಲಿದೆ: ಡಾ.ಕೆ.ಸುಧಾಕರ್

ಏಪ್ರಿಲ್ 10ರಿಂದ ಉಪಚುನಾವಣಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿರುವ ಸಿಎಂ ಯಡಿಯೂರಪ್ಪ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಎರಡೆರಡು ದಿನ ಪ್ರಚಾರ ನಡೆಸಲಿದ್ದು, ಬೆಳಗಾವಿಯಲ್ಲಿ ಲೋಕಸಭಾ ಕ್ಷೇತ್ರದಲ್ಲಿಯೂ ಮತ್ತೊಮ್ಮೆ ಪ್ರಚಾರ ಕೈಗೊಳ್ಳಲ್ಲಿದ್ದಾರೆ.

ನಾಳೆಯಿಂದ ಒಂದು ವಾರಗಳ ಕಾಲ ನಿರಂತರವಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಹಿನ್ನೆಲೆಯಲ್ಲಿ ಇಂದು ಹೆಚ್ಚು ಕಾರ್ಯಕ್ರಮಗಳನ್ನು ಹಾಕಿಕೊಳ್ಳದ ಸಿಎಂ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಎರಡು ಸಭೆ ಹೊರತುಪಡಿಸಿದರೆ ಇಡೀ ದಿನ ಸಮಯವನ್ನು ಕಾಯ್ದಿರಿಸಿ ಸಿಎಂ ವಿಶ್ರಾಂತಿ ಮೊರೆ ಹೋಗಿದ್ದಾರೆ.

ABOUT THE AUTHOR

...view details