ಕರ್ನಾಟಕ

karnataka

ETV Bharat / state

ನಿರೀಕ್ಷಿತ ಸಂಖ್ಯೆಯಲ್ಲಿ ಸಭೆಗೆ ಬಾರದ ಸಂಸದರು; ಕಾಯುತ್ತಿರುವ ಸಿಎಂ! - CM BS Y waiting for MPs

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಗಂಟೆಗೆ ಸಂಸದರ ಸಭೆ ಕರೆಯಲಾಗಿದ್ದು, ಸಮಯಕ್ಕೆ ಸರಿಯಾಗಿ ಸಿಎಂ ಯಡಿಯೂರಪ್ಪ ಆಗಮಿಸಿದರಾದರೂ ಸಂಸದರು ನಿರೀಕ್ಷಿತ ಸಂಖ್ಯೆಯಲ್ಲಿ ಇನ್ನು ಆಗಮಿಸಿಲ್ಲ. ಹಾಗಾಗಿ ಅರ್ಧ ಗಂಟೆ ತಡವಾಗಿ ಸಭೆ ಆರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ.

CM BSY
ಸಿಎಂ ಬಿಎಸ್​ವೈ

By

Published : Nov 27, 2020, 4:32 PM IST

ಬೆಂಗಳೂರು: ಸಂಪುಟ ವಿಸ್ತರಣೆ ಪ್ರಹಸನ ಮತ್ತು ನಿಗಮ ಮಂಡಳಿ ನೇಮಕಾತಿ ನಂತರ ಏಳುತ್ತಿರುವ ಅಸಮಾಧಾನ ಶಮನಗೊಳಿಸಿ ಸಂಸದರನ್ನು ವಿಶ್ವಾಸಕ್ಕೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಸದರ ಸಭೆ ಕರೆದಿದ್ದು, ಕೆಲವೇ ಕ್ಷಣಗಳಲ್ಲಿ ಸಭೆ ಆರಂಭಗೊಳ್ಳಲಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಗಂಟೆಗೆ ಸಂಸದರ ಸಭೆ ಕರೆಯಲಾಗಿದ್ದು ಸಮಯಕ್ಕೆ ಸರಿಯಾಗಿ ಸಿಎಂ ಯಡಿಯೂರಪ್ಪ ಆಗಮಿಸಿದರಾದರೂ ಸಂಸದರು ನಿರೀಕ್ಷಿತ ಸಂಖ್ಯೆಯಲ್ಲಿ ಇನ್ನು ಆಗಮಿಸಿಲ್ಲ. ಹಾಗಾಗಿ ಅರ್ಧ ಗಂಟೆ ತಡವಾಗಿ ಸಭೆಯನ್ನು ಆರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಸಂಸದರ ಆಗಮನದ ನಿರೀಕ್ಷೆಯಲ್ಲಿ ಸಿಎಂ ಕಾದು ಕುಳಿತಿದ್ದಾರೆ.

ಸದ್ಯ ಸಂಸದರಾದ ದೇವೇಂದ್ರಪ್ಪ, ನಾರಾಯಣಸ್ವಾಮಿ, ಕರಡಿ ಸಂಗಣ್ಣ, ಪ್ರತಾಪ್ ಸಿಂಹ, ಜಿ.ಎಸ್. ಬಸವರಾಜ್ ಸೇರಿದಂತೆ ಐದಾರು ಸಂಸದರು ಮಾತ್ರ ಆಗಮಿಸಿದ್ದು, ದೆಹಲಿಯಲ್ಲಿರುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಸಂಸದರಾದ ಭಗವಂತ ಖೂಬಾ, ಅಣ್ಣಾ ಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿ, ಬೆಂಗಳೂರು ಹೊರಗೆ ಇರುವ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಗೈರಾಗಲಿದ್ದಾರೆ ಎನ್ನಲಾಗಿದೆ.

ನಿಗಮ ಮಂಡಳಿಗಳ ನೇಮಕದ ಬೆನ್ನಲ್ಲೇ ಸಂಸದ ಶ್ರೀನಿವಾಸ್ ಪ್ರಸಾದ್ ತಮ್ಮ ಅಸಮಾಧಾನ ಹೊರಹಾಕಿದ್ದರು. ನಂತರ ಮತ್ತೆ ಕೆಲ ಸಂಸದರಿಗೂ ಅಸಮಾಧಾನವಾಗಿದೆ. ಈ ಹಿನ್ನಲೆ ಸಂಸದರನ್ನು ವಿಶ್ವಾಸಕ್ಕೆ ಪಡೆಯಲು ಸಿಎಂ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಅನೌಪಚಾರಿಕೆ ಸಭೆ ಎನ್ನುವ ಆಹ್ವಾನ ಪತ್ರಗಳನ್ನು ಸಂಸದರಿಗೆ ತಲುಪಿಸಿದ್ದರೂ ಸಭೆಯಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನ ಕುರಿತು ಸಮಾಲೋಚನೆ ನಡೆಸಿ, ರಾಜಕೀಯ ಚರ್ಚೆಯನ್ನೂ ನಡೆಸಲಾಗುತ್ತದೆ. ಸದ್ಯದ ರಾಜಕೀಯ ಸ್ಥಿತಿ, ಅನಿವಾರ್ಯ ಸಂದರ್ಭದ ನಿರ್ಧಾರಗಳ ವಿವರಣೆ, ಪಕ್ಷದಲ್ಲಿ ಎದ್ದಿರುವ ಸಣ್ಣಪುಟ್ಟ ಗೊಂದಲಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ABOUT THE AUTHOR

...view details