ಬೆಂಗಳೂರು:ಸತತ 40 ದಿನಗಳ ಕಾಲ ನಡೆದ ಅಯೋಧ್ಯೆ ಭೂವಿವಾದದ ವಾದ ಪ್ರತಿವಾದ ಅ.16ರಂದು ಕೊನೆಗೊಂಡಿದ್ದು, ಇಡೀ ದೇಶ ಸುಪ್ರೀಂ ತೀರ್ಪಿನತ್ತ ಕುತೂಹಲದ ದೃಷ್ಟಿ ನೆಟ್ಟಿದೆ.
1885ರ ಮೊದಲ ಅರ್ಜಿಯಿಂದ ಸತತ 40 ದಿನಗಳ ನಿತ್ಯ ವಿಚಾರಣೆವರೆಗೆ..! ಇಂಚಿಂಚು ಮಾಹಿತಿ

ಇದೇ ವಿಚಾರವಾಗಿ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ, ದೇಶದ ಜನತೆ ಈ ವಿಚಾರದಲ್ಲಿ ಒಂದಾಗಿ ಮುನ್ನಡೆಯಬೇಕು ಎಂದು ಕರೆಕೊಟ್ಟಿದ್ದಾರೆ. ರಾಮಜನ್ಮಭೂಮಿ ಅಯೋಧ್ಯೆ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಕ್ಷೇತ್ರ. ಇದೇ ಜಾಗದ ಸುತ್ತ ಸುತ್ತಿರುವ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸದ್ಯದಲ್ಲೇ ಹೊರಬೀಳಲಿದೆ. ಆದರೆ ದೇಶದ ಜನತೆ ಈ ಐತಿಹಾಸಿಕ ತೀರ್ಪಿನ ವೇಳೆ ಒಗ್ಗಟ್ಟಾಗಿದ್ದು, ಸಾಮರಸ್ಯದ ಸಂದೇಶವನ್ನು ಸಾರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಅ.16ರಂದು ಎಲ್ಲ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ನ.17ರಂದು ಹಾಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನಿವೃತ್ತರಾಗಲಿದ್ದು ಅದಕ್ಕೂ ಮುನ್ನವೇ ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪು ಹೊರ ಬರಲಿದೆ.