ಬೆಂಗಳೂರು: ಕೇರಳ ಪ್ರವಾಸದ ವೇಳೆ ನಡೆದ ಪ್ರತಿಭಟನೆಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದು, ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ಸಿಎಂ ಕಾರಿಗೆ ಮುತ್ತಿಗೆ....ಕೇರಳದ ಘನತೆ ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ ಬಿಎಸ್ವೈ - ಸಿಎಂ ಬಿಎಸ್ ಯಡಿಯೂರಪ್ಪ ಲೆಟೆಸ್ಟ್ ಟ್ವೀಟ್
ಕೇರಳ ಪ್ರವಾಸದ ವೇಳೆ ನಡೆದ ಪ್ರತಿಭಟನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದು, ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕೃತ್ಯಕ್ಕೆ ಎಲ್ಲಾ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.
ನಿನ್ನೆ ರಾತ್ರಿ ಕೇರಳಕ್ಕೆ ಭೇಟಿ ನೀಡುತ್ತಿದ್ದಂತೆ ಪ್ರತಿಭಟನೆ ಎದುರಾಗಿತ್ತು. ಈ ವೇಳೆ ಪ್ರತಿಭಟನಾನಿರತರನ್ನು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು, ಆದರೆ ಬೆಳಗ್ಗೆ ಮತ್ತೆ ಸಿಎಂ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು, ರಾತ್ರಿ ಘಟನೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದಾಗಿದ್ದರೂ ಕೂಡಾ ಭದ್ರತಾ ಲೋಪ ಕಂಡುಬಂದಿದ್ದಕ್ಕೆ ಸಿಎಂ ತೀವ್ರ ಬೇಸರಗೊಂಡಿದ್ದಾರೆ. ಪ್ರತಿಭಟನಾನಿರತರ ವಿರುದ್ಧ ಅಸಮಧಾಗೊಂಡರೂ ರಾಜ್ಯದ ಜನತೆಗೆ ಅದನ್ನು ತಳಕುಹಾಕದೆ ಕೇವಲ ಮುತ್ತಿಗೆ ಯತ್ನಕ್ಕಷ್ಟೇ ಖಂಡನೆ ವ್ಯಕ್ತಪಡಿಸಿ ದೇವರ ನಾಡಿನ ಜನರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.