ಬೆಂಗಳೂರು: ಮರಾಠಿಗರು, ಕನ್ನಡಿಗರು ಅಂತ ಯಾವುದೇ ಬೇಧಭಾವಕ್ಕೆ ಅವಕಾಶ ಕೊಡಲ್ಲವೆಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪೀರನವಾಡಿಯಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ, ಎಲ್ಲರೂ ಸಹಕಾರ ಕೊಡ್ತಿದ್ದಾರೆ: ಸಿಎಂ ಬಿಎಸ್ವೈ - Statue of Sangolli Rayanna
ಪೀರನವಾಡಿಯ ಗಲಾಟೆ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಸಿಎಂ ಬಿಎಸ್ವೈ ಪ್ರತಿಕ್ರಿಯಿಸಿದ್ದಾರೆ. ಈಗ ಪೀರನವಾಡಿ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ, ಶಾಂತವಾಗಿ ಸಮಸ್ಯೆ ಬಗೆಹರಿಯುತ್ತದೆ. ಮರಾಠಿಗರು, ಕನ್ನಡಿಗರು ಅಂತ ಯಾವುದೇ ಬೇಧಭಾವಕ್ಕೆ ಅವಕಾಶ ಕೊಡಲ್ಲ. ಜಿಲ್ಲಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದಿದ್ದಾರೆ.
ಪೀರನವಾಡಿಯಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ, ಎಲ್ಲರೂ ಸಹಕಾರ ಕೊಡ್ತಿದ್ದಾರೆ: ಸಿಎಂ ಬಿಎಸ್ವೈ
ವಿಧಾನಸೌಧದಲ್ಲಿ ಬೆಳಗಾವಿಯ ರಾಯಣ್ಣ ಪ್ರತಿಮೆ ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಧಿಕಾರಿಗಳ ಜತೆ ಈಗಾಗಲೇ ಚರ್ಚಿಸಿ, ಸೂಚನೆ ಕೊಟ್ಟಿದ್ದೇನೆ ಎಂದರು.
ಸೂಕ್ಷ್ಮವಾಗಿ, ಶಾಂತ ರೀತಿಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಈಗ ಪರಿಸ್ಥಿತಿ ಶಾಂತವಾಗಿದೆ, ಎಲ್ಲರೂ ಸಹಕಾರ ಕೊಡ್ತಿದ್ದಾರೆ. ಈಗ ಪೀರನವಾಡಿ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ, ಶಾಂತವಾಗಿ ಸಮಸ್ಯೆ ಬಗೆಹರಿಯುತ್ತದೆ. ಮರಾಠಿಗರು, ಕನ್ನಡಿಗರು ಅಂತ ಯಾವುದೇ ಬೇಧಭಾವಕ್ಕೆ ಅವಕಾಶ ಕೊಡಲ್ಲ. ಜಿಲ್ಲಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.