ಕರ್ನಾಟಕ

karnataka

ETV Bharat / state

ಅಧಿಕಾರಿಗಳೊಂದಿಗೆ ಚರ್ಚಿಸಿ ಲಾಕ್ಡೌನ್​ ವಿಸ್ತರಣೆ ಬಗ್ಗೆ ನಿರ್ಧಾರ : ಸಿಎಂ ಬಿಎಸ್​ವೈ - ಲಾಕ್​ ಡೌನ್ ಬಗ್ಗೆ ಸಿಎಂ ಪ್ರತಿಕ್ರಿಯೆ

ಅವರ ಸಮಸ್ಯೆಗಳನ್ನು ಕೇಳಿದ್ಧೇನೆ. ನರ್ಸ್​ಗಳು ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ಕೆಲವು ಸಲಹೆಗಳು ಕೊಟ್ಟಿದ್ದಾರೆ. ಆ ಬಗ್ಗೆ ಸಮಾಲೋಚನೆ ಮಾಡುತ್ತೇನೆ..

CM BSY reaction on lockdown extension
ಕರ್ನಾಟಕ ಲಾಕ್ ಡೌನ್​

By

Published : May 31, 2021, 1:57 PM IST

ಬೆಂಗಳೂರು : ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜೂನ್ 4 ಅಥವಾ 5ರ ಬಳಿಕ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಾಕ್ಡೌನ್ ವಿಸ್ತರಣೆ ಮಾಡಬೇಕೆ, ಬೇಡವೇ ಎಂಬುವುದರ ಬಗ್ಗೆ ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಂತರ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ಲಾಕ್‌ಡೌನ್​ ವಿಸ್ತರಣೆ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ

ಓದಿ : ಇನ್ನೂ 14 ದಿನ ಲಾಕ್‌ಡೌನ್‌ ವಿಸ್ತರಣೆ?: ಬಿಎಸ್‌ವೈ ಕೈಸೇರಿದ ಕೋವಿಡ್ ತಾಂತ್ರಿಕ ಸಮಿತಿ ವರದಿ

ರಾಜ್ಯದಲ್ಕಿ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿರುವ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮಕೈಗೊಳ್ಳುತ್ತೇನೆ. ಈಗ ತಾನೆ ಕೋವಿಡ್ ಸಂಬಂಧ ಕೆಲಸ ಮಾಡುತ್ತಿರುವ ನರ್ಸ್‌ಗಳ ಜೊತೆ ಮಾತುಕತೆ ನಡೆಸಿದ್ದೇನೆ.

ಅವರ ಸಮಸ್ಯೆಗಳನ್ನು ಕೇಳಿದ್ಧೇನೆ. ನರ್ಸ್​ಗಳು ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ಕೆಲವು ಸಲಹೆಗಳು ಕೊಟ್ಟಿದ್ದಾರೆ. ಆ ಬಗ್ಗೆ ಸಮಾಲೋಚನೆ ಮಾಡುತ್ತೇನೆ ಎಂದರು.

ABOUT THE AUTHOR

...view details