ಬೆಂಗಳೂರು: ಕಾರ್ಗಿಲ್ ವಿಜಯದಲ್ಲಿ ಹುತಾತ್ಮರಾದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಶ್ರೀಮತಿ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನ ನೆಹರು ತಾರಾಲಯದ ಎದುರು ಗೌರವ ಸಮರ್ಪಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಕಾರ್ಗಿಲ್ ಹುತಾತ್ಮ ಯೋಧರಿಗೆ, ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಎದುರು ನಮನ ಸಲ್ಲಿಸಿದರು. ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಹಾಗೂ ಗೃಹ ಸಚಿವ ಬೊಮ್ಮಾಯಿ ಸಾಥ್ ನೀಡಿದರು.
ಕಾರ್ಗಿಲ್ ವಿಜಯ್ ದಿವಸ್, ಹುತಾತ್ಮರ ಸ್ಮಾರಕಕ್ಕೆ ಸಿಎಂ ನಮನ ಇದೇ ವೇಳೆ ಸಿಎಂ ಯಡಿಯೂರಪ್ಪ ಮಾತಾನಾಡಿ ಅತ್ಯಂತ ಹೆಮ್ಮೆಯಿಂದ ನಾವೆಲ್ಲರೂ ಇಂದು ಹುತಾತ್ಮರಾದವರಿಗೆ ನಮನ ಸಲ್ಲಿಸಲು ಭಾಗವಹಿಸಿದ್ದೇವೆ. ಭಾರತೀಯ ಯೋಧರ ಶೌರ್ಯ, ತ್ಯಾಗಕ್ಕೆ ಸದಾ ಕೃತಜ್ಞರಾಗಿದ್ದೇವೆ. ದೇಶದ ಕಾರ್ಗಿಲ್ ಪ್ರದೇಶವನ್ನ ಪಾಕಿಸ್ತಾನ ಆಕ್ರಮಿಸಿಕೊಂಡಿತ್ತು. ಆಗ ಅಸಾಧ್ಯದ ವಾತಾವರಣದಲ್ಲಿ ಯೋಧರು ಕೆಚ್ಚೆದೆಯಿಂದ ಸತತವಾಗಿ ಹೋರಾಡಿ ಆ ಪ್ರದೇಶವನ್ನು ಮರು ವಶಪಡಿಸಿಕೊಂಡರು.
ಹುತಾತ್ಮರಾಗಿದ್ದ ಯೋಧರು ಹಾಗೂ ಮಾಜಿ ಸೈನಿಕರಿಗೆ ಸರ್ಕಾರ ಸದಾ ನೆರವು ನೀಡುತ್ತೆ. ದೇಶ ರಕ್ಷಣೆ ಮಾಡುವ ಸೈನಿಕರ ಪರ ನಿಲ್ಲಲು ಸರ್ಕಾರ ಸದಾ ಸಿದ್ಧವಿದೆ. ಹುತಾತ್ಮ ಕಾರ್ಗಿಲ್ ಯೋಧರ ಕುಟುಂಬದೊಂದಿಗೆ ನಾವಿದ್ದೇವೆ ಅವರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.