ಕರ್ನಾಟಕ

karnataka

ETV Bharat / state

ಪುಣ್ಯತಿಥಿ: ಕೆಂಗಲ್ ಪ್ರತಿಮೆಗೆ ಸಿಎಂ ಬಿಎಸ್​ವೈ ಮಾಲಾರ್ಪಣೆ - B. S. Yediyurappa

ಮಾಜಿ ಮುಖ್ಯಮಂತ್ರಿ, ಭವ್ಯ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಅಂಗವಾಗಿ ಸಿಎಂ ಯಡಿಯೂರಪ್ಪ ಕೆಂಗಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Yediyurappa
ಯಡಿಯೂರಪ್ಪ

By

Published : Dec 1, 2020, 12:14 PM IST

ಬೆಂಗಳೂರು: ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಅಂಗವಾಗಿ ಸಿಎಂ ಯಡಿಯೂರಪ್ಪ ಮಂಗಳವಾರ ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಹಾಗು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ ಮಾಡಿದರು.

ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಆಚರಣೆ

ಬಳಿಕ ಮಾತನಾಡಿದ ಸಿಎಂ, ಕೆಂಗಲ್ ಹನುಮಂತಯ್ಯ ಓರ್ವ ದೂರದೃಷ್ಟಿ ಹೊಂದಿದ್ದ ನಾಯಕ ಹಾಗು ಮುತ್ಸದ್ದಿ ರಾಜಕಾರಣಿಯಾಗಿದ್ದವರು. ದಕ್ಷ ಆಡಳಿತ ನೀಡುವ ಮೂಲಕ ರಾಜ್ಯದ ಏಳಿಗೆಗಾಗಿ ಅವರು ಶ್ರಮಿಸಿದ್ದರು ಎಂದು ಕೊಂಡಾಡಿದರು.

ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ರೈಲ್ವೇ ಸಚಿವರಾಗಿ, ಆಡಳಿತ ಸುಧಾರಣಾ ಆಯೋಗದ ಮೊದಲ ಅಧ್ಯಕ್ಷರಾಗಿಯೂ ಕೆಂಗಲ್ ಅವರ ಸೇವೆ ಮಹತ್ವದ್ದು ಎಂದು ಅವರು ಸ್ಮರಿಸಿದರು.

ಕನ್ನಡ ಭಾಷೆ, ಸಂಸ್ಕೃತಿ, ಕರ್ನಾಟಕದ ಏಕೀಕರಣಕ್ಕೂ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರು ಕಟ್ಟಿಸಿದ ವಿಧಾನಸೌಧ ಕಟ್ಟಡ ದೇಶದಲ್ಲಿಯೇ ಭವ್ಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ABOUT THE AUTHOR

...view details