ಕರ್ನಾಟಕ

karnataka

ETV Bharat / state

ಮೊದಲ ಬಾರಿಗೆ ಯೋಗ ದಿನಾಚರಣೆಯಿಂದ ದೂರ ಉಳಿದ ಸಿಎಂ - ಅಂತಾರಾಷ್ಟ್ರೀಯ ಯೋಗ ದಿನ

ಈ ಹಿಂದೆ ಸಂಸದ, ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರಾಗಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಸಿಎಂ ಬಿಎಸ್​ವೈ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಯೋಗ ದಿನಾಚರಣೆಯಿಂದ ದೂರ ಉಳಿದಿದ್ದಾರೆ.

CM BSY Not Participated in Yoga Day
ಯೋಗ ದಿನಾಚರಣೆಯಿಂದ ದೂರ ಉಳಿದ ಸಿಎಂ

By

Published : Jun 21, 2020, 10:58 AM IST

ಬೆಂಗಳೂರು : ಇಂದು ಆರನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ, ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯೋಗ ದಿನಾಚರಣೆಯಿಂದ ದೂರ ಉಳಿದು ಕೇವಲ ಸಂದೇಶ ಮಾತ್ರ ನೀಡಿದ್ದಾರೆ.

ಪ್ರತೀ ವರ್ಷ ಯೋಗ ದಿನದಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ವತಃ ಯೋಗಾಭ್ಯಾಸದಲ್ಲಿ ತೊಡಗುತ್ತಿದ್ದರು. ಸಂಸದ, ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರಾಗಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಬಿಎಸ್​ವೈ, ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಯೋಗ ದಿನಾಚರಣೆಯಿಂದ ದೂರ ಉಳಿದಿದ್ದಾರೆ. ಕೊರೊನಾ ಭೀತಿ ಹಾಗು ವಯಸ್ಸಿನ ಸಹಕಾರ ಸಮಸ್ಯೆ ಕಾರಣದಿಂದ ಸಿಎಂ ಯೋಗ ದಿನಾಚರಣೆಯಿಂದ ದೂರ ಉಳಿದು ನಾಡಿನ ಜನತೆಗೆ ಯೋಗ ದಿನದ ಸಂದೇಶ ನೀಡಿ ಸುಮ್ಮನಾಗಿದ್ದಾರೆ.

ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ವಿಶ್ವಕ್ಕೆ ಭಾರತದ ಕೊಡುಗೆಯಾಗಿರುವ "ಯೋಗ" ನಮ್ಮ ಹಿರಿಯರು ನಮಗೆ ನೀಡಿದ ಹೆಮ್ಮೆಯ ಬಳುವಳಿ. ಇದನ್ನು ಉಳಿಸಿಕೊಳ್ಳುವ ಹಾಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ, ಆರೋಗ್ಯಪೂರ್ಣ ಜೀವನವನ್ನು ಸಂಭ್ರಮಿಸೋಣ, ಸಾರ್ಥಕ ಬದುಕನ್ನು ಬಾಳೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details