ಬೆಂಗಳೂರು: ಸಂಪುಟ ಸಹೋದ್ಯೋಗಿ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಹಿರಂಗದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಜುಗರಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಾರ್ಯಕ್ರಮಗಳಿಂದ ದೂರ ಉಳಿದು ನಿವಾಸದಲ್ಲೇ ಕುಳಿತಿದ್ದಾರೆ.
ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ವಿವಾಹ ಮುಹೂರ್ತವೊಂದರಲ್ಲಿ ಭಾಗಿಯಾಗಬೇಕಿದ್ದ ಸಿಎಂ ಕೊನೆ ಕ್ಷಣದಲ್ಲಿ ಭಾಗಿಯಾಗುವ ಕಾರ್ಯಕ್ರಮವನ್ನು ರದ್ದುಪಡಿಸಿ ಕಾವೇರಿ ನಿವಾಸದಲ್ಲೇ ಕುಳಿತಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣದಿಂದ ಸ್ವತಃ ಸಿಎಂ ಯಡಿಯೂರಪ್ಪ ಮುಜುಗರಕ್ಕೊಳಗಾಗಿದ್ದು, ಯಾವ ರೀತಿ ಸಮರ್ಥನೆ ಮಾಡಿಕೊಳ್ಳಬೇಕು ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗ್ತಿದೆ.
ಇದನ್ನು ಓದಿ: ಜಾರಕಿಹೊಳಿ ವಿರುದ್ಧದ ದೂರು: ವಿಸ್ತೃತ ತನಿಖೆ ಭರವಸೆ ನೀಡಿದ ಬೊಮ್ಮಾಯಿ
ಒಂದು ಕಡೆ ಸರ್ಕಾರ ರಚನೆಗೆ ಕಾರಣರಾದವರು ಎನ್ನುವ ಒಲವು, ಮತ್ತೊಂದು ಕಡೆ ಸಿಡಿ ಬಿಡುಗಡೆಯಿಂದ ಆಗಿರುವ ಅಹಿತಕರ ಚಟುವಟಿಕೆ ಮೂಲಕ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಸನ್ನಿವೇಶ. ಈ ಎರಡೂ ಕಾರಣಗಳಿಂದಾಗಿ ಸಿಎಂ ಯಡಿಯೂರಪ್ಪ ಜಾರಕಿಹೊಳಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಮುಜುಗರಕ್ಕೂ ಒಳಗಾಗುವಂತೆ ಮಾಡಿದೆ. ಹಾಗಾಗಿ ಮಧ್ಯಾಹ್ನದವರೆಗೂ ನಿವಾಸದಲ್ಲೇ ಇದ್ದು, ನೇರವಾಗಿ ಸಚಿವ ಸಂಪುಟ ಸಭೆಗೆ ತೆರಳಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.