ಕರ್ನಾಟಕ

karnataka

ETV Bharat / state

ಶಾಸಕರೊಂದಿಗಿನ ಸಿಎಂ ಬಿಎಸ್​ವೈ ಸಮಾಲೋಚನಾ ಸಭೆ ಆರಂಭ - bengaluru Latest News 2020

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ಸಲುವಾಗಿ ಶಾಸಕರ ಸಮಾಲೋಚನಾ ಸಭೆ ನಡೆಸುತ್ತಿದ್ದಾರೆ.

ಬಿಎಸ್​ವೈ ಸಮಾಲೋಚನಾ ಸಭೆ ಆರಂಭ
ಬಿಎಸ್​ವೈ ಸಮಾಲೋಚನಾ ಸಭೆ ಆರಂಭ

By

Published : Jan 4, 2021, 12:24 PM IST

Updated : Jan 4, 2021, 12:40 PM IST

ಬೆಂಗಳೂರು: 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಸಿದ್ದತೆ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ಸಲುವಾಗಿ ಬಜೆಟ್ ಪೂರ್ವದಲ್ಲೇ ಶಾಸಕರ ಸಮಾಲೋಚನಾ ಸಭೆ ನಡೆಸುತ್ತಿದ್ದಾರೆ.

ಸಿಎಂ ಬಿಎಸ್​ವೈ ಸಮಾಲೋಚನಾ ಸಭೆ

ಎರಡು ದಿನಗಳ ಕಾಲ ನಗರದ ಕ್ಯಾಪಿಟಲ್ ಹೋಟೆಲ್​ನಲ್ಲಿ ಪಕ್ಷದ ಶಾಸಕರೊಂದಿಗೆ ನಡೆಯಲಿರುವ ಸಭೆಗೆ ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಿದ ಸಿಎಂ ಭೋಜನ ವಿರಾಮದವರೆಗೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ 17 ಶಾಸಕರ ಜೊತೆ ಸಮಾಲೋಚನೆ ನಡೆಸಿದರು.

ಶಾಸಕರ ಆರೋಪಗಳೇನು?

ಉಸ್ತುವಾರಿ ಸಚಿವರು, ಸಚಿವರು, ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ. ಅನುದಾನ ಸರಿಯಾಗಿ ಸಿಗುತ್ತಿಲ್ಲ ಎಂದು ಸ್ವಪಕ್ಷೀಯ ಶಾಸಕರೇ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ಅಸಮಧಾನ ಶಮನಕ್ಕೆ ಸಂಪುಟ ಸಹೊದ್ಯೋಗಿಗಳನ್ನೂ ಕರೆಸಿಕೊಂಡು ಸಿಎಂ ಸಭೆ ನಡೆಸುತ್ತಿದ್ದಾರೆ.

ಇದನ್ನು ಓದಿ:ಗಾಜಿಯಾಬಾದ್​ ದುರಂತ.. ಮೃತರ ಕುಟುಂಬಸ್ಥರಿಂದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated : Jan 4, 2021, 12:40 PM IST

ABOUT THE AUTHOR

...view details