ಕರ್ನಾಟಕ

karnataka

ETV Bharat / state

ಮಹದಾಯಿ ವಿವಾದ ಚರ್ಚೆಗೆ ಮುಹೂರ್ತ ಫಿಕ್ಸ್​: 14 ರಂದು ಗೋವಾ ಸಿಎಂ ಜೊತೆ ಬಿಎಸ್​ವೈ ಚರ್ಚೆ - ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್

ಮಹದಾಯಿ ವಿವಾದವನ್ನು ಕೊನೆಗೊಳಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸೆ. 14 ರಂದು ಗೋವಾ ಸಿಎಂ ಜೊತೆ ಬಿಎಸ್​ವೈ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎನ್ನಲಾಗ್ತಿದೆ.

ಬಿಎಸ್​ವೈ ಚರ್ಚೆ

By

Published : Sep 11, 2019, 12:36 PM IST

ಬೆಂಗಳೂರು:ಮಹದಾಯಿ ಜಲವಿವಾದ ಸಂಬಂಧ ಮಾತುಕತೆ ನಡೆಸಲು ಮುಹೂರ್ತ ನಿಗದಿಯಾಗಿದ್ದು, ಸೆಪ್ಟಂಬರ್​ 14ರಂದು ಗೋವಾ ಸಿಎಂ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

ಪಣಜಿಯಲ್ಲಿ ನಡೆಯಲಿರುವ ಮಹತ್ವದ ಮಾತುಕತೆಯಲ್ಲಿ, ಗೋವಾ ಸಿಎಂ ಪ್ರಮೋದ್​​ ಸಾವಂತ್​​ ಜೊತೆ ಸಿಎಂ ಬಿಎಸ್​ವೈ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಒಂದು ಹಂತದ ಮಾತುಕತೆ ನಡೆಸಿರುವ ಸಿಎಂ, ನಂತರ ಮತ್ತೊಮ್ಮೆ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋವಾ, ಮಹಾರಾಷ್ಟ್ರ ಸಿಎಂಗಳ ಜೊತೆ ಮಾತುಕತೆ ನಡೆಸಲು‌ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಭಯ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸಮಯ ನಿಗದಿಪಡಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details