ಗೀತಾ ನಾಗಭೂಷಣ ನಿಧನ: ಸಂತಾಪ ಸೂಚಿಸಿದ ಸಿಎಂ ಯಡಿಯೂರಪ್ಪ - ಸಿಎಂ ಬಿಎಸ್ವೈ ಸಂತಾಪ
ಕಲ್ಯಾಣ ಕರ್ನಾಟಕದಲ್ಲಿ ಪ್ರತಿಕೂಲ ವಾತಾವರಣದಲ್ಲಿ ಬೆಳೆದ ಗೀತಾ ನಾಗಭೂಷಣ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ನಾಡೋಜ ಪದವಿ ಪಡೆದ ರಾಜ್ಯದ ಮೊದಲ ಮಹಿಳೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿದ್ದಾರೆ.
ಬೆಂಗಳೂರು: ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗೀತಾ ನಾಗಭೂಷಣ ಅವರು ಕಾದಂಬರಿ, ಕಥೆ, ಕವಿತೆ, ಸಂಶೋಧನೆ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ಕಾದಂಬರಿಗಳಲ್ಲಿನ ಹೆಣ್ಣಿನ ಬದುಕಿನ ಚಿತ್ರಣಗಳು ವಾಸ್ತವತೆಯನ್ನು ಬಿಂಬಿಸುತ್ತಿದ್ದವು. ಕಲ್ಯಾಣ ಕರ್ನಾಟಕದಲ್ಲಿ ಪ್ರತಿಕೂಲ ವಾತಾವರಣದಲ್ಲಿ ಬೆಳೆದ ಗೀತಾ ನಾಗಭೂಷಣ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಮಹಿಳೆ ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ.