ಬೆಂಗಳೂರು: ರೈತರ ಕುರಿತು ಆಹಾರ ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದು, ಗೋಧಿ ಬೇಡ ಎಂದರೆ ಅದರ ಬದಲು ಅಕ್ಕಿಯನ್ನೇ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಾಯುವುದೇ ಒಳ್ಳೆಯದು ಎಂಬ ಕತ್ತಿ ಹೇಳಿಕೆಗೆ ಸಿಎಂ ವಿಷಾದ.. ಗೋಧಿ ಬದಲು ಅಕ್ಕಿ ವಿತರಿಸುವ ಭರವಸೆ
15:17 April 28
ಆಹಾರ ಸಚಿವ ಸಚಿವ ಉಮೇಶ್ ಕತ್ತಿಗೆ ಕರೆ ಮಾಡಿದ್ದ ರೈತರೊಬ್ಬರಿಗೆ ಸಾಯುವುದು ಒಳ್ಳೆಯದು ಎಂದು ಉಡಾಫೆ ಉತ್ತರ ನೀಡಿದ್ದರು. ರೈತನೋರ್ವ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದರಿಂದ ಕಷ್ಟವಾಗುತ್ತಿದೆ. ಲಾಕ್ಡೌನ್ನಲ್ಲಿ ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ, ಸಾಯುವುದು ಒಳ್ಳೆಯದು, ಮತ್ತೆ ಕರೆ ಮಾಡಬೇಡಿ ಎಂದು ಸಚಿವರು ಹೇಳಿದ್ದರು. ಇದಕ್ಕೆ ಸಿಎಂ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಸಚಿವ ಉಮೇಶ್ ಕತ್ತಿಗೆ ಕರೆ ಮಾಡಿದ್ದ ರೈತರೊಬ್ಬರಿಗೆ ಸಾಯುವುದು ಒಳ್ಳೆಯದು ಎಂದು ಉಡಾಫೆ ಉತ್ತರ ನೀಡಿದ್ದರು. 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದರಿಂದ ಕಷ್ಟವಾಗುತ್ತಿದೆ. ಲಾಕ್ಡೌನ್ನಲ್ಲಿ ಸಾಯಬೇಕಾ ಬದುಕಬೇಕಾ ಎಂದು ರೈತ ಕೇಳಿದಾಗ ಸಾಯುವುದು ಒಳ್ಳೆಯದು, ಮತ್ತೆ ಕರೆ ಮಾಡಬೇಡಿ ಎಂದು ಸಚಿವರು ಪ್ರತಿಕ್ರಿಯಿಸಿದ್ದರು.
ಇದೀಗ ಆ ಭಾಗದಲ್ಲಿ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನೇ ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ಸಚಿವ ಉಮೇಶ್ ಕತ್ತಿ ಅವರು ಬಿಪಿಎಲ್ ಕಾರ್ಡುಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿದ್ದರು. ಫ್ರಿಡ್ಜ್, ಟಿವಿ, ಬೈಕ್ ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಾಗಿ ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ಇದನ್ನೂ ಓದಿ:ಅಕ್ಕಿ ಇಲ್ಲದೇ ಉಪವಾಸ ಸಾಯ್ಬೇಕಾ ಎಂದ ರೈತನಿಗೆ ಸತ್ತರೆ ಒಳ್ಳೆಯದೇ ಎಂದ ಸಚಿವ ಕತ್ತಿ.. ಆಡಿಯೋ ವೈರಲ್