ಕರ್ನಾಟಕ

karnataka

ETV Bharat / state

₹1,250 ಕೋಟಿ ವೆಚ್ಚದ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಬಿಎಸ್‌ವೈ.. ಅಸಂಘಟಿತ ಕಾರ್ಮಿಕರು, ರೈತರಿಗೆ ಸಿಕ್ಕಿದ್ದು,ದಕ್ಕಿದ್ದೆಷ್ಟು? - CM BSY announced lockdown package

ಮೇ 23ರಂದು ಲಾಕ್​ಡೌನ್ ಮುಂದುವರಿಸುವ​ ಕುರಿತು ತೀರ್ಮಾನ ಮಾಡುತ್ತೇವೆ. ಪ್ರಸ್ತುತ ಆರ್ಥಿಕ ಪ್ಯಾಕೇಜ್​ ಘೋಷಣೆಯಿಂದ 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆ..

CM BSY announced lockdown package for state
1,250 ಕೋಟಿ ವೆಚ್ಚದ ಪ್ಯಾಕೇಜ್​ ಘೋಷಿಸಿದ ಸಿಎಂ

By

Published : May 19, 2021, 1:08 PM IST

ಬೆಂಗಳೂರು :ಕೊರೊನಾ ಎರಡನೇ ಅಲೆ ತಡೆಗೆ ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಾಗಿದೆ. ಅಸಂಘಟಿತ ವರ್ಗದ ಕಾರ್ಮಿಕರು, ರೈತರು ಸಂಕಷ್ಟದಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ 1,250 ಕೋಟಿ ರೂ. ಮೌಲ್ಯದ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.

ಸಿಎಂ ಸುದ್ದಿಗೋಷ್ಟಿ

ಕೊರೊನಾ ಮೊದಲ ಅಲೆಯ ವೇಳೆ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ ವಿಧಿಸಿದ್ದಾಗ ಅಸಂಘಟಿಕ ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡಲಾಗಿತ್ತು. ಅದೇ ರೀತಿ ಈ ಬಾರಿ 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ನೀಡಲು ಸರ್ಕಾರ ನಿರ್ಧರಿಸಿದೆ.

ಇದೇ ವೇಳೆ ಶಿಕ್ಷಕರು, ಲೈನ್ಮ್ಯಾನ್, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ಸ್ ಇವರನ್ನೆಲ್ಲಾ ಫ್ರಂಟ್‌ಲೈನ್ ವಾರಿಯರ್ಸ್‌ ಎಂದು ಪರಿಗಣಿಸಲಾಗಿದ್ದು, ಆದ್ಯತೆ ಮೇರೆಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಯಾರಿಗೆಲ್ಲ ಸರ್ಕಾರದಿಂದ ಪರಿಹಾರ?: ಸಂಪೂರ್ಣ ವಿವರ..

1. ರೈತರಿಗೆ ಸಹಾಯಧನ

ಹಣ್ಣು, ತರಕಾರಿ, ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿಯಂತೆ ಸಹಾಯಧನ ನೀಡಲಾಗಿದ್ದು, ಇದಕ್ಕೆ 70 ಕೋಟಿ ರೂ. ಮೀಸಲು.

2. ಆಟೋ, ಕ್ಯಾಬ್‌, ಮ್ಯಾಕ್ಸಿ ಚಾಲಕರು

ನೋಂದಾಯಿತ ಆಟೋ, ಕ್ಯಾಬ್​, ಮ್ಯಾಕ್ಸಿ ಚಾಲಕರಿಗೆ ತಲಾ 3,000 ರೂ. ಪರಿಹಾರ

3. ಕಟ್ಟಡ ಕಾರ್ಮಿಕರು

ಕಟ್ಟಡ ಕಾರ್ಮಿಕರಿಗೆ ತಲಾ 3000 ರೂ. ಪರಿಹಾರ ನೀಡಲಾಗಿದೆ. ಇತರೆ ಅಸಂಘಟಿತ ಕಾರ್ಮಿಕರಿಗೆ ತಲಾ 2000 ರೂ. ಪರಿಹಾರ ನೀಡಿದ್ದು, ಇದಕ್ಕಾಗಿ 61 ಕೋಟಿ ರೂ. ಮೀಸಲಿಡಲಾಗಿದೆ.

4. ಬೀದಿ ಬದಿ ವ್ಯಾಪಾರಿಗಳಿಗೆ ನೆರವು

ಬೀದಿ ಬದಿ ವ್ಯಾಪಾರಿಗಳಿಗೆ 2,000 ರೂ.ಒದಗಿಸಲಾಗಿದೆ.

5. ಸವಿತಾ ಸಮಾಜ

ಸವಿತಾ ಸಮಾಜದ ಸದಸ್ಯರಿಗೆ 2,000 ರೂ. ಪರಿಹಾರ

6. ಕಲಾವಿದರು, ಕಲಾ ತಂಡಗಳಿಗೆ ಹಣಕಾಸು ನೆರವು

ಕಲಾವಿದರು, ಕಲಾ ತಂಡಗಳಿಗೆ ತಲಾ 3,000 ರೂ.ನಂತೆ 16,100 ಜನರಿಗೆ ನೀಡಲಾಗುವುದು. ಇದಕ್ಕೆ 4 ಕೋಟಿ ರೂಪಾಯಿ ಖರ್ಚಾಗಲಿದೆ.

7. ಪಡಿತರ ನೀಡಲು ನಿರ್ಧಾರ:

ಪ್ರಧಾನಮಂತ್ರಿ ಗರೀಬ್ ಯೋಜನೆಯಡಿಯಲ್ಲಿ ಬಡವರಿಗೆ ಪಡಿತರ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. 180 ಕೋಟಿ ರೂ. ವೆಚ್ಚದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಇದರಂತೆ ಮೇ ಮತ್ತು ಜೂನ್ ತಿಂಗಳಲ್ಲಿ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ.

ಬಿಪಿಎಲ್​, ಅಂತ್ಯೋದಯ ಕಾರ್ಡ್​ ಹೊಂದಿರುವವರಿಗೆ ಪ್ರತಿ ತಿಂಗಳಿಗೆ 5 ಕೆಜಿ ಅಕ್ಕಿ, ಎಪಿಎಲ್​ ಕಾರ್ಡ್​ದಾರರಿಗೆ ಕೆಜಿ 15 ರೂ.ಯಂತೆ ಅಕ್ಕಿ ವಿತರಣೆ, ಬಿಪಿಎಲ್​ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೂ ಎರಡು ತಿಂಗಳು ಉಚಿತ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ.

8.ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ ವಿತರಣೆ ಮುಂದುವರಿಕೆ

ಬಿಬಿಎಂಪಿ ವ್ಯಾಪ್ತಿ, ನಗರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ ವಿತರಣೆ ಮುಂದುವರಿಯಲಿದೆ.

9. ಸಾಲ ಮರುಪಾವತಿ ದಿನಾಂಕ ವಿಸ್ತರಣೆ :

ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆಯಾಗಿದೆ. ಸಾಲ ಮರುಪಾವತಿ ದಿನಾಂಕವನ್ನು 01.05.21 ರಿಂದ 31.07.21ರವರೆಗೆ ಮುಂದೂಡಿಕೆ ಮಾಡಲಾಗಿದೆ.
10. ಗ್ರಾಮ ಪಂಚಾಯತ್‌ಗಳಿಗೆ ಹಣ :

ಕೋವಿಡ್​ ನಿರ್ವಹಣೆಗೆ ಗ್ರಾಮ ಪಂಚಾಯತ್‌ಗಳಿಗೆ 50,000 ರೂ. ಮುಂಗಡ ಹಣ ಪಾವತಿ. ಇದರಿಂದ 6 ಸಾವಿರ ಗ್ರಾಪಂಗಳಿಗೆ ಲಾಭವಾಗಲಿದೆ.

11. 2,500 ವೈದ್ಯರ ನೇಮಕ :

ಸೋಂಕಿತ ರೋಗಿಗಳಿಗೆ ಸರ್ಕಾರದಿಂದ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ. ಕೊರೊನಾ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ 3 ದಿನಗಳಲ್ಲಿ 2,500 ವೈದ್ಯರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನ.

12. ಅನಾಥ ಬಂಧು ಯೋಜನೆ :

ಕೊರೊನಾದಿಂದ ತಂದೆ, ತಾಯಿ ಕಳೆದುಕೊಂಡಿರುವ ಮತ್ತು ಪತಿಯನ್ನು ಕಳೆದುಕೊಂಡವರಿಗಾಗಿ ಅನಾಥ ಬಂಧು ಯೋಜನೆ ಜಾರಿಗೆ ಹಣಕಾಸು ಇಲಾಖೆಗೆ ಸಿಎಂ ಸೂಚನೆ.

ಲಾಕ್‌ಡೌನ್ ಮುಂದುವರಿಕೆ ಬಗ್ಗೆ ಮೇ 23ಕ್ಕೆ ನಿರ್ಧಾರ :

ಮೇ 23ರಂದು ಲಾಕ್​ಡೌನ್ ಮುಂದುವರಿಸುವ​ ಕುರಿತು ತೀರ್ಮಾನ ಮಾಡುತ್ತೇವೆ. ಪ್ರಸ್ತುತ ಆರ್ಥಿಕ ಪ್ಯಾಕೇಜ್​ ಘೋಷಣೆಯಿಂದ 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವರಿಸಿದರು.

ABOUT THE AUTHOR

...view details