ಕರ್ನಾಟಕ

karnataka

ETV Bharat / state

ಯಾರಿಗೆ ಯಾವ ಖಾತೆ? ರಾಜಭವನಕ್ಕೆ ಸಚಿವರ ಪಟ್ಟಿ ರವಾನೆ! - ರಾಜ್ಯ ಸಚಿವ ಸಂಪುಟ

ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ರಾಜ್ಯಪಾಲರಿಗೆ ಪಟ್ಟಿ ರವಾನೆ ಆಗಿದೆ.

CM BS Yediyurappa cabinet
CM BS Yediyurappa cabinet

By

Published : Jan 21, 2021, 5:27 AM IST

Updated : Jan 21, 2021, 8:45 AM IST

ಬೆಂಗಳೂರು:ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲ ಸಚಿವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದುಬಂದಿದೆ..

ನೂತನ ಸಚಿವರ ಖಾತೆ:

ಆನಂದ್ ಸಿಂಗ್ - ಸಣ್ಣನೀರಾವರಿ
ಉಮೇಶ್ ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಸರಬರಾಜು
ಎಸ್ ಅಂಗಾರ - ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಅರವಿಂದ ಲಿಂಬಾವಳಿ- ಅರಣ್ಯ ಇಲಾಖೆ
ಮುರುಗೇಶ್ ನಿರಾಣಿ - ಗಣಿ ಮತ್ತು ಭೂವಿಜ್ಞಾನ
ಎಂಟಿಬಿ ನಾಗರಾಜ್ -ಅಬಕಾರಿ ಇಲಾಖೆ
ಆರ್ ಶಂಕರ್ - ಪೌರಾಡಳಿತ ಇಲಾಖೆ

ಓದಿ:'ಜೂನ್'ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟ

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿದ್ದ ಬಿಎಸ್​ವೈ ಖಾತೆ ಹಂಚಿಕೆ ವಿಚಾರವಾಗಿ ಎಲ್ಲವೂ ರೆಡಿ ಇದೆ. ಬೆಳಿಗ್ಗೆ 8 ಗಂಟೆಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ನಿನ್ನೆ ತಿಳಿಸಿದ್ದರು. ವಿಧಾನಸೌಧದಲ್ಲಿ ಮಾತನಾಡಿದ್ದ ಅವರು, ಇಂದು ಸಂಜೆ ಮಂತ್ರಿ ಮಂಡಲ ಸಭೆ ಇದೆ. ಅಷ್ಟರೊಳಗೆ ಖಾತೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಸ್​ವೈ ಸಂಪುಟದಲ್ಲಿ ಹೊಸದಾಗಿ ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂಟಿಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದ್ದರು.

Last Updated : Jan 21, 2021, 8:45 AM IST

ABOUT THE AUTHOR

...view details