ಕರ್ನಾಟಕ

karnataka

ETV Bharat / state

ಸಿಎಂ B.S.ಯಡಿಯೂರಪ್ಪ ನಗರ ಪ್ರದಕ್ಷಿಣೆ.. ಹಲವೆಡೆ ಟ್ರಾಫಿಕ್ ಜಾಂ! - ಅಭಿವೃದ್ಧಿ ಕಾರ್ಯಗಳಿಗೆ ವೇಗ ತುಂಬಲು ಮುಂದಾಗಿರುವ ಸಿಎಂ ಬಿಎಸ್​ವೈ

ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಸಿಟಿ ರೌಂಡ್ಸ್ ಆರಂಭಿಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದಾರೆ.

ಸಿಎಂ B.S.ಯಡಿಯೂರಪ್ಪ
ಸಿಎಂ B.S.ಯಡಿಯೂರಪ್ಪ

By

Published : Jul 23, 2021, 12:11 PM IST

Updated : Jul 23, 2021, 12:47 PM IST

ಬೆಂಗಳೂರು: ನಾಯಕತ್ವ ಬದಲಾವಣೆಯ ವಿಚಾರ ಬಲವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಅಭಿವೃದ್ಧಿ ಕಾರ್ಯಗಳಿಗೆ ವೇಗ ತುಂಬಲು ಮುಂದಾಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರು ನಗರ ಪ್ರದಕ್ಷಿಣೆಗೆ ಆರಂಭ ಮಾಡಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಆನಂದ್ ರಾವ್​ ವೃತ್ತದಿಂದ ಆರಂಭವಾಗಿರುವ ಸಿಟಿ ರೌಂಡ್ಸ್ ಮಧ್ಯಾಹ್ನ 1.30ರ ವರೆಗೂ ಮುಂದುವರಿಯಲಿದೆ. ನಗರದ ನಾನಾ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡಲಿರುವ ಸಿಎಂ, ಗಾಂಧಿನಗರ, ಗೋವಿಂದರಾಜನಗರ, ರಾಜರಾಜೇಶ್ವರಿನಗರ, ಸರ್.ಸಿ.ವಿ. ರಾಮನ್‌ನಗರ, ಶಾಂತಿನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದ್ದಾರೆ.

ಸಿಎಂ ಬಿಎಸ್​ವೈಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್, ಸಚಿವರಾದ ಆರ್.ಅಶೋಕ್, ವಿ. ಸೋಮಣ್ಣ, ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಎಸ್.ಟಿ. ಸೋಮಶೇಖರ್ ಸಾಥ್ ನೀಡಿದ್ದಾರೆ. ನಗರದಲ್ಲಿ ತುಂತುರು ಮಳೆಯಾಗುತ್ತಿದ್ದು, ಮಳೆಯ ನಡುವೆಯೂ ಸಿಎಂ ಬಿಎಸ್​​ವೈ ನಗರ ಪ್ರದಕ್ಷಿಣೆಯನ್ನು ಆರಂಭ ಮಾಡಿದ್ದಾರೆ.

ಸಿಎಂ ಅವರಿಂದ ನಗರ ಪ್ರದಕ್ಷಿಣೆ ಹಿನ್ನೆಲೆ ರೇಸ್ ಕೋರ್ಸ್ ರಸ್ತೆ, ಕುಮಾರ ಕೃಪ ರಸ್ತೆ, ಶೇಷಾದ್ರಿಪುರಂ ರಸ್ತೆ, ಮೆಜೆಸ್ಟಿಕ್ ಮೊದಲಾದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್​ ಜಾಂ ಉಂಟಾಗಿದೆ.

Last Updated : Jul 23, 2021, 12:47 PM IST

ABOUT THE AUTHOR

...view details