ಕರ್ನಾಟಕ

karnataka

‘ಈ ಯಡಿಯೂರಪ್ಪನಿಂದ ರೈತರಿಗೆ ಅನ್ಯಾಯವಾಗಲ್ಲ’: ಅನ್ನದಾತರಿಗೆ ಸಿಎಂ ಅಭಯ

By

Published : Sep 28, 2020, 1:59 PM IST

ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತಿದ್ದುಪಡಿ ತಂದಿದ್ದೇವೆ. ಆದರೆ ರೈತರನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ನಾನು ರೈತ ಬಾಂಧವರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಈ ಕಾಯ್ದೆಗಳಿಂದ ರೈತರಿಗೆ ಯಾವುದೇ ಸಮಸ್ಯೆಯಿಲ್ಲ. ನಿಮ್ಮ ಹಿತ ಕಾಯಲು ನಾನೆಂದು ಸಿದ್ಧನಿದ್ದೇನೆ ಎಂದು ಅಭಯ ನೀಡಿದ್ದಾರೆ.

cm-bs-yedyyrappa
ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಕೃಷಿ ಮಸೂದೆಗಳ ವಿರುದ್ಧ ರೈತ ಸಮುದಾಯ ಆಕ್ರೋಶ ಹೊರಹಾಕಿದ್ದು, ಭಾರತ ಬಂದ್​​​ಗೆ ಕರೆ ನೀಡಲಾಗಿದೆ. ಈ ನಡುವೆ ರಾಜ್ಯದಲ್ಲೂ ರೈತರ ಪ್ರತಿಭಟನೆ ಜೋರಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ರೈತರ ಪ್ರತಿಭಟನೆ ಕುರಿತಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಈ ಮಸೂದೆಗಳಿಂದ ರೈತರಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದಿದ್ದಾರೆ. ನೀರಾವರಿ ಭೂಮಿಯನ್ನು ಯಾರಾದರು ತೆಗೆದುಕೊಂಡರೆ ಅಲ್ಲಿ ಕೃಷಿಯನ್ನೇ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಭೂಮಿಯನ್ನು ಯಾರೂ ಖರೀದಿ ಮಾಡುವಂತಿಲ್ಲ ಎಂಬ ನಿಯಮ ಹಾಗೆಯೇ ಇದೆ ಎಂದಿದ್ದಾರೆ.

ರೈತರ ಪ್ರತಿಭಟನೆ ಕುರಿತು ಸಿಎಂ ಬಿಎಸ್​​​​​ವೈ ಪ್ರತಿಕ್ರಿಯೆ

ಅಲ್ಲದೆ ಸಣ್ಣ, ಅತೀ ಸಣ್ಣ ರೈತರಿಗೆ ಯಾವುದೇ ಸಮಸ್ಯೆಯಾಗಲು ಬಿಡುವುದಿಲ್ಲ, ಈ ಯಡಿಯೂರಪ್ಪನಿಂದ ರೈತರಿಗೆ ಅನ್ಯಾಯವಾಗೋ ಕೆಲಸ ಆಗೋದಿಲ್ಲ, ಅವರ ಹಿತ ಕಾಯುತ್ತೇವೆ. ಕೃಷಿಗೆ ಉಪಯೋಗವಿಲ್ಲದ ಭೂಮಿಯಲ್ಲಿ ಕೈಗಾರಿಕೆ ಮಾಡುವುದರಿಂದ ಉದ್ಯೋಗ ಸಿಗುತ್ತದೆ. ನಿರುದ್ಯೋಗ ಸಮಸ್ಯೆ ನೀಗುತ್ತದೆ. 6 ತಿಂಗಳ ಕಾಲ ಕಾದು ನೋಡಿ, ಇದರ ಫಲಾಫಲದ ಬಗ್ಗೆ ತಿಳಿಯಲಿದೆ ಎಂದು ಸಿಎಂ ರೈತರಿಗೆ ಮನವಿ ಮಾಡಿದ್ದಾರೆ.

ಯಾರು ಬೇಕಾದರೂ, ಎಲ್ಲಿ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಆದರೆ ರೈತರನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ನಾನು ರೈತ ಬಾಂಧವರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಈ ಕಾಯ್ದೆಗಳಿಂದ ರೈತರಿಗೆ ಯಾವುದೇ ಸಮಸ್ಯೆಯಿಲ್ಲ. ನಿಮ್ಮ ಹಿತ ಕಾಯಲು ನಾನೆಂದು ಸಿದ್ಧನಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details