ಬೆಂಗಳೂರು: ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ, ಅವರ ಹಿನ್ನೆಲೆ ಏನು ಎಂದು ಗೊತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲದಕ್ಕೂ ಆರ್.ಎಸ್.ಎಸ್ ಅಂತ ಹೇಳ್ತಾರೆ. ಪ್ರತಿ ಪಕ್ಷ ನಾಯಕರು ಬರೀ ಟೀಕೆ ಮಾಡೋದೆ ಕೆಲಸ. ಆರ್.ಎಸ್.ಎಸ್ ಅಂತ ಬೊಬ್ಬೆ ಹೊಡೀತಾರೆ. ಇವತ್ತು ಈ ಸ್ಥಾನಕ್ಕೆ ಬರಲು ಆರ್. ಎಸ್. ಎಸ್. ಕಾರಣ. ಅವರ ಐಡಿಯಾಲಜಿಯನ್ನ ನಾನು ಕಲಿತಿದ್ದೇನೆ. ಮೋದಿ ಪ್ರಧಾನಿಯಾಗಿ ಬರಲು ಆರ್. ಎಸ್. ಎಸ್. ಕಾರಣ. ಅವರೇ ಆರ್. ಎಸ್. ಎಸ್. ಅಂತ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ, ಅವರ ಹಿನ್ನೆಲೆ ಏನು?. ಪಕ್ಷದಲ್ಲಿರೋ ಆಂತರಿಕ ಗೊಂದಲ ಬಗೆಹರಿಸಿಕೊಳ್ಳಲಿ ಎಂದು ಕಿಡಿ ಕಾರಿದರು.
ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ಇವರು ಎಷ್ಟು ಬಾರಿ ಹೇಳ್ತಾರೋ, ಅಷ್ಟು ಆರ್ಎಸ್ಎಸ್ ಬಲಿಷ್ಠವಾಗಲಿದೆ. ಟೀಕೆ ಟಿಪ್ಪಣಿ ಮಾಡಲಿ, ಅದನ್ನ ಚರ್ಚೆ ಮೂಲಕ ಮಾಡಲಿ. ಮೋದಿ ಬಗ್ಗೆ ದೇಶವೇ ಮೆಚ್ಚುತ್ತಿದೆ. ಗಡ್ಡ ಬಿಟ್ಟಿದ್ದಾರೆ ಹಾಗೆ ಹೀಗೆ ಅಂತ ಹೇಳ್ತಾರೆ. ನೀವು ವಿಪಕ್ಷ ನಾಯಕರಿದ್ದೀರಿ, ನೀವು ಹೇಳುವ ಮಾತು ಇಡೀ ಕಾಂಗ್ರೆಸ್ ಪಕ್ಷ ಹೇಳಿದಂತೆ. ಸಿದ್ಧರಾಮಯ್ಯ ಅವರೇ ವಿರೋಧ ಪಕ್ಷದ ನಾಯಕರಾಗಿ ಹಗುರವಾಗಿ ಮಾತಾಡಬೇಡಿ. ವಿಪಕ್ಷ ನಾಯಕನಾಗಿ ಉತ್ತಮವಾಗಿ ನಡೆಯಿರಿ. ಸಂಗಮೇಶ್ ಪ್ರಕರಣ ಸಮರ್ಥಿಸಿಕೊಳ್ತೀರಾ ಎಂದು ಪ್ರಶ್ನಿಸಿದರು.
ಓದಿ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಫ್ಐಆರ್ ದಾಖಲಿಸುವ ಬಗ್ಗೆ ಪೊಲೀಸರಲ್ಲೇ ಗೊಂದಲ.!?
ಇಂದೂ ಕೂಡ ಪ್ರತಿಭಟನೆ ಮಾಡೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರಿಗೆ ಅನ್ಯಾಯ ಆಗಿದ್ರೆ ಸದನದಲ್ಲಿ ಚರ್ಚೆ ಮಾಡಲಿ. ಅವರು 19 ಜನ ಮಾತನಾಡಿದ್ರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡೋಣ ಅಂತ ಹೇಳಿ ಈಗ ವಿರೋಧ ಮಾಡ್ತಿದ್ದಾರೆ. ರಮೇಶ್ ಕುಮಾರ್ ಸ್ಪೀಕರ್ ಆಗಿದ್ದವರು. ಅವರು ಹೇಗೆ ವರ್ತಿಸುತ್ತಿದ್ರು ಅಂತ ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.